ಅನ್ನದಾತ, ಉದ್ಯೋಗದಾತರಾಗಿದ್ದ ರಘು ಸಪಲ್ಯ : ಕಲ್ಲಡ್ಕ ಪ್ರಭಾಕರ ಭಟ್ ಬಣ್ಣನೆ :

Kalladka Prabhakar Bhat
Published on

ಬಂಟ್ವಾಳ: ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿ ಜೈಲು ಸೇರಿ ದೇಶಾಭಿಮಾನ ತೋರಿದ್ದ ದಿವಂಗತ ಬಿ.ರಘು ಸಪಲ್ಯರು ಬೀಡಿ ಉದ್ಯಮಿಯಾಗಿ ನೂರಾರು ಮಂದಿಗೆ ಅನ್ನದಾತ, ಉದ್ಯೋಗದಾತ, ಕೃಷಿಕರಾಗಿ ಗುರುತಿಸಿಕೊಂಡು ಜಿಲ್ಲೆಯ ವಿವಿಧ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಅಭಿವೃದ್ಧಿಯಲ್ಲಿ ಕ್ರಿಯಾಶೀಲರಾಗಿದ್ದರು ಎಂದು ಆರ್‌ಎಸ್‌ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.

ಪಾಣೆಮಂಗಳೂರಿನಲ್ಲಿ ಗಾಣಿಗರ ಸೇವಾ ಸಂಘದ ಅಧ್ಯಕ್ಷ, ಆರ್‌ಎಸ್‌ಎಸ್ ಹಿರಿಯ ಕಾರ್ಯಕರ್ತ ದಿವಂಗತ ಬಿ.ರಘು ಸಪಲ್ಯ ಪಾಣೆಮಂಗಳೂರು ಅವರಿಗೆ ಭಾನುವಾರ ಸಂಜೆ ನಡೆದ ಶ್ರದ್ಧಾಂಜಲಿ ಸಭೆಗೆ ಚಾಲನೆ ನೀಡಿ ಮಾತನಾಡಿದರು.

ಶಾಸಕ ರಾಜೇಶ ನೈಾಕ್‌ ಉಳಿಪಾಡಿಗುತ್ತು ಮಾತನಾಡಿ, ದಿವಂಗತ ಬಿ.ರಘು ಸಪಲ್ಯ ಧಾರ್ಮಿಕ ಕ್ಷೇತ್ರಗಳಲ್ಲಿ ನಗುಮುಖದಿಂದ ಕ್ರಿಯಾಶೀಲರಾಗಿದ್ದರು ಎಂದರು.

ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ ತುರ್ತು ಪರಿಸ್ಥಿತಿ ವೇಳೆ ಒಟ್ಟಾಗಿ ನಡೆಸಿದ್ದ ಹೋರಾಟಗಳ ಬಗ್ಗೆ ನೆನಪಿಸಿಕೊಂಡರು.

ಹಿರಿಯ ವೈದ್ಯ ಡಾ.ವಿಶ್ವನಾಥ ನಾಯಕ್, ಬೀಡಿ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಹನೀಫ್ ಗೋಳ್ತಮಜಲು, ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ, ಜಿಲ್ಲಾ ಗಾಣಿಗರ ಸಂಘದ ಮಾಜಿ ಅಧ್ಯಕ್ಷ ತಾರನಾಥ ಸುವರ್ಣ, ಪ್ರಮುಖರಾದ ಜಗನ್ನಾಥ ಬಂಗೇರ ನಿರ್ಮಲ್, ಮಾಧವ ಎಸ್.ಮಾವೆ, ಹರಿರಾಮಚಂದ್ರ ಉಪ್ಪಿನಂಗಡಿ, ಭಾಸ್ಕರ ಎಡಪದವು, ದೇವಪ್ಪ ಮುಂಡ್ಕೂರು, ರಾಜೇಶ ಬಂಗೇರ ಮೂಡುಬಿದಿರೆ, ಕೃಷ್ಣಪ್ಪ ಬಂಗೇರ ನುಡಿನಮನ ಸಲ್ಲಿಸಿದರು.

ಬಿಜೆಪಿ ಕ್ಷೇತ್ರಾಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್, ಬೂಡ ಅಧ್ಯಕ್ಷ ಬೇಬಿ ಕುಂದರ್, ಬಂಟರ ಸಂಘ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ, ಜಿಲ್ಲಾ ಗಾಣಿಗ ಸಂಘ ಅಧ್ಯಕ್ಷ ವಿಶ್ವಾಸ್ ದಾಸ್ ಕುಮಾರ್, ಪ್ರಮುಖರಾದ ರಾಮದಾಸ್ ಬಂಟ್ವಾಳ್, ದಿನೇಶ ಅಮ್ಟೂರು, ಪ್ರಭಾಕರ ಪ್ರಭು, ಮಚ್ಚೇಂದ್ರನಾಥ ಸಾಲ್ಯಾನ್, ಆನಂದ ಶಂಭೂರು, ಪ್ರೇಮನಾಥ ಶೆಟ್ಟಿ, ಪುರುಷೋತ್ತಮ ಸಾಲ್ಯಾನ್, ಪಾಂಡುರಂಗ ಪ್ರಭು, ಮಾಧವ ಕರ್ಬೆಟ್ಟು, ಪಿ.ಎಸ್.ಅಬ್ದುಲ್ ಹಮೀದ್, ಕೇಶವ ಮಳಲಿ, ತಿಮ್ಮಪ್ಪ ಸಪಲ್ಯ ಇಡ್ಕಿದು, ಕೃಷ್ಣಪ್ಪ ಗಾಣಿಗ, ನರ್ಸಪ್ಪ ಅಮೀನ್, ವಿಶ್ವನಾಥ ಎಸ್.ಎ., ಎಂ.ಎನ್.ಕುಮಾರ್, ಪದ್ಮನಾಭ ಪಜೀರು, ನಾಗೇಶ ಪಾಣೆಮಂಗಳೂರು, ದಿನೇಶ ಬೋಳಂತೂರು, ಪದ್ಮನಾಭ ಇಡ್ಕಿದು, ಲಿಂಗಪ್ಪ ಕರ್ಕೇರ, ಡೊಂಬಯ ಟೈಲರ್, ವೇದವ ಗಾಣಿಗ, ಸಚಿನ್ ಮೆಲ್ಕಾರ್, ಬಾಲಕೃಷ್ಣ ಸೆರ್ಕಳ, ರವೀಂದ್ರ ಸಪಲ್ಯ, ಭುವನೇಶ್ ಮೊಗರ್ನಾಡು ಮತ್ತಿತರರು ಇದ್ದರು.

ಸುಮಂಗಲಾ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ನಾಗೇಶ ಕಲ್ಲಡ್ಕ ಸ್ವಾಗತಿಸಿದರು. ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಉಮೇಶ ಬೋಳಂತೂರು ವಂದಿಸಿದರು. ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ಕಾರ್ಯಕ್ರಮ ನಿರೂಪಿಸಿದರು.

ದಿವಂಗತ ರಘು ಸಪಲ್ಯ ಪಕ್ಷ ಸಿದ್ಧಾಂತಗಳ ಭಿನ್ನತೆ ನಡುವೆ ಎಲ್ಲ ಜಾತಿ ಧರ್ಮಗಳೊಂದಿಗೆ ಸ್ನೇಹದಿಂದ ಬೆರೆತು ಎಲ್ಲರಿಗೂ ಹತ್ತಿರವಾಗಿದ್ದರು. - ರಮಾನಾಥ ರೈ ಮಾಜಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net