ತುರ್ತು ಪರಿಸ್ಥಿತಿ ದೇಶದ ಕರಾಳ ಅಧ್ಯಾಯ: ಬಿಜೆಪಿ

25-06-rama-bjp
Published on

ರಾಮನಗರ: ಸಂವಿಧಾನವನ್ನು 21 ತಿಂಗಳ ಕಾಲ ಅವಾನತಿನಲ್ಲಿಟ್ಟ ಇಂದಿರಾ ಗಾಂಧಿ ಅವರು ವ್ಯಕ್ತಿ, ವಾಧ್ಯಮ ಹಾಗೂ ನ್ಯಾಯಾಲಯದ ಸ್ವಾತಂತ್ರ್ಯ ಹರಣ ವಾಡಿದ್ದರು ಎಂದು ಮಾಜಿ ಸಚಿವ ಎನ್ ಮಹೇಶ್ ಕಿಡಿಕಾರಿದರು.

ನಗರದ ಆರ್.ವಿ.ಸಿ.ಎಸ್ ಕಲ್ಯಾಣ ಮಂಟಪದಲ್ಲಿ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಕರಾಳ ಇತಿಹಾಸಕ್ಕೆ 50 ವರ್ಷ ವಿಷಯ ಕುರಿತು ಬಿಜೆಪಿ ಹಮ್ಮಿಕೊಂಡಿದ್ದ ಅವಲೋಕನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ದೇಶದ ಪ್ರಜಾಪ್ರಭುತ್ವಕ್ಕೆ ದೊಡ್ಡ ಪೆಟ್ಟು ಕೊಟ್ಟ ತುರ್ತು ಪರಿಸ್ಥಿತಿ. ಆ ಸಂದರ್ಭದಲ್ಲಿ ನಾನು ಕೊಳ್ಳೇಗಾಲದಲ್ಲಿ ಪದವಿ ವಿದ್ಯಾರ್ಥಿಯಾಗಿದ್ದೆ. ತುರ್ತು ಪರಿಸ್ಥಿತಿ ಘೋಷಿಸುವಂತಹ ಆಂತರಿಕ ಕ್ಷೋಭೆ, ಆರ್ಥಿಕ ಮುಗ್ಗಟ್ಟು, ರಾಷ್ಟ್ರೀಯ ಭದ್ರತೆಗೆ ಧಕ್ಕೆ, ಸಶಸ್ತ್ರ ದಂಗೆ, ಬಾಹ್ಯ ಆಕ್ರಮಣ, ರಾಜ್ಯಗಳ ನಡುವೆ ಕಲಹ ಸೇರಿದಂತೆ ಯಾವುದೂ ಇರಲಿಲ್ಲ. ಯಾವುದೇ ರಕ್ತಪಾತವಿಲ್ಲದೆ ಪ್ರಜೆಗಳ ಬದುಕಿನಲ್ಲಿ ಸಾವಾಜಿಕ ಮತ್ತು ಆರ್ಥಿಕ ಕ್ರಾಂತಿಕಾರಿ ಬದಲಾವಣೆಗಳನ್ನು ತರಬಲ್ಲ ವ್ಯವಸ್ಥೆಯೇ ಪ್ರಜಾಪ್ರಭುತ್ವ ಎಂದು ಅಂಬೇಡ್ಕರ್ ಹೇಳುತ್ತಾರೆ. ಆದರೆ 1971ರ ಚುನಾವಣೆಯಲ್ಲಿ ಅಕ್ರಮವೆಸಗಿ ಆಯ್ಕೆಯಾಗಿದ್ದಾರೆ ಎಂದು 1975ರಲ್ಲಿ ಅಹಮದಾಬಾದ್ ಹೈ ಕೋರ್ಟ್ ತೀರ್ಪು ನೀಡುತ್ತದೆ.

ಆರು ವರ್ಷ ಚುನಾವಣೆ ಸ್ಪರ್ಧೆಗೆ ನಿಷೇಧ ಹೇರುತ್ತದೆ. ಇಂದಿರಾ ಅವರು ಸುಪ್ರೀಂ ಮೊರೆ ಹೋಗುತ್ತಾರೆ. ತೀರ್ಪು ವಿರೋಧಿಸಿ ದೆಹಲಿಯಲ್ಲಿ ಬಹತ್ ಪ್ರತಿಭಟನೆ ನಡೆಸುತ್ತಾರೆ.

ವಿ.ಆರ್. ಕೃಷ್ಣ ಅಯ್ಯರ್ ಅವರು ಹೈಕೋರ್ಟ್ ತೀರ್ಪಿಗೆ ಷರತ್ತುಬದ್ದ ತಡೆ ನೀಡಿದರು. ಪ್ರಧಾನಿಯಾಗಿ ಮುಂದುವರಿದರೂ ಚರ್ಚೆಯಲ್ಲಿ ಭಾಗವಹಿಸುವಂತಿಲ್ಲ. ಮತ ಹಾಕುವಂತಿಲ್ಲ ಎಂದು ಹೇಳಿ ಸಂವಿಧಾನ ಪೀಠಕ್ಕೆ ವರ್ಗಾವಣೆ ವಾಡಿದರು.

ಇದೇ ಸಂದರ್ಭದಲ್ಲಿ ಬಿಹಾರದಲ್ಲಿ ವಿದ್ಯಾರ್ಥಿ ಚಳವಳಿ ಶುರುವಾಗಿತ್ತು. ಅಲಹಾಬಾದ್ ಕೋರ್ಟ್ ತೀರ್ಪು ಉಲ್ಲಂಟನೆ ವಿರೋಧಿಸಿ ಜಯಪ್ರಕಾಶ್ ನಾರಾಯಣ ಅವರು ಜನಾಂದೋಲನ ಹೋರಾಟ ರೂಪಿಸುತ್ತಾರೆ. ಆಗ ಇಂದಿರಾ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಜೂನ್ 25ರಂದು ಮಧ್ಯರಾತ್ರಿ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅವರಿಂದ ಬಲವಂತವಾಗಿ ತುರ್ತು ಪರಿಸ್ಥಿತಿ ಆದೇಶಕ್ಕೆ ಸಹಿ ವಾಡಿಸಿಕೊಳ್ಳುತ್ತಾರೆ.

ಸಂಸತ್ ಒಪ್ಪಿಗೆ ಪಡೆಯಲು 26ರಂದು ಬೆಳಿಗ್ಗೆ 6 ಗಂಟೆಗೆ ಸಚಿವ ಸಂಪುಟದ ಸಭೆ ಕರೆದು ಒಪ್ಪಿಗೆ ಪಡೆಯುತ್ತಾರೆ. ತಮ್ಮ ವಿರುದ್ಧ ದೇಶದಾದ್ಯಂತ ಜನ ದಂಗೆ ಎದ್ದರೆ ಏನು ವಾಡೋದು ಎಂಬ ಆತಂಕದಿಂದ ರಾಷ್ಟ್ರಪತಿ ಆದೇಶವನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ ಎಂದು ಜುಲೈ 28ರಂದು ಸಂವಿಧಾನಕ್ಕೆ 38ನೇ ತಿದ್ದುಪಡಿ ತರುತ್ತಾರೆ. ಇದಾದ ನಂತರ ಹಲವಾರು ತಿದ್ದುಪಡಿಗಳನ್ನು ತಂದು ನ್ಯಾಯಾಲಯ, ಮಾಧ್ಯಮ ಹೀಗೆ ಎಲ್ಲದರ ಮೇಲೂ ನಿರ್ಬಂಧ ವಿಧಿಸುತ್ತಾರೆ ಎಂದು ಟೀಕಿಸಿದರು.

ಆದರೆ ನಂತರ ಅಧಿಕಾರಕ್ಕೆ ಬಂಧ ರಾಜೀವ್ ಗಾಂಧಿ ಪ್ರಧಾನಿಯಾಗಿ ತಮ್ಮ ತಾಯಿ ನಡೆಯನ್ನು ಸಂಸತ್ತಿನಲ್ಲಿ ಸಮರ್ಥನೆ ವಾಡಿಕೊಂಡಿದ್ದರು. ಈಗ ಅವರ ಮೊಮ್ಮಕ್ಕಳು ಸಂವಿಧಾನದ ಪ್ರತಿ ಹಿಡಿದು ಸಂವಿಧಾನ ರಕ್ಷಣೆ ವಾಡುತ್ತೇವೆ ಎಂದು ಹೇಳಲು ಯೋಗ್ಯತೆ ಇದೆಯೇ? ಎಂದು ಮಹೇಶ್ ಪ್ರಶ್ನಿಸಿದರು.

ಇಂದಿರಾಗಿಂತಲೂ ಅವರ ಮಗ ಸಂಜಯ್ ಗಾಂಧಿ ದೊಡ್ಡ ಸರ್ವಾಧಿಕಾರಿ ಆಗಿದ್ದ. ಆತ ಜನಸಂಖ್ಯೆ ನಿಯಂತ್ರಣ ನಿಯಮ ಜಾರಿಗೆ ತಂದು, ಎಲ್ಲರಿಗೂ ಟಾರ್ಗೆಟ್ ನೀಡಿದ್ದ. ಸಂಸತ್ ಸದಸ್ಯನೂ ಆಗದ ಆತ ಕೇರಳಕ್ಕೆ ಹೋದಾಗ ಸ್ವಾಗತಿಸಲಿಲ್ಲ ಎಂದು ಅಲ್ಲಿನ ಸರ್ಕಾರವನ್ನು ವಜಾಗೊಳಿಸಿದ್ದ ಎಂದು ಜರಿದ ಮಹೇಶ್, ತುರ್ತು ಪರಿಸ್ಥಿತಿ ಕರಾಳ ದಿನವನ್ನು ಸಂವಿಧಾನ ಹತ್ಯಾ ದಿನ ಎಂದು ಬಿಜೆಪಿ ಹಮ್ಮಿಕೊಂಡಿದೆ ಎಂದರು. ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಹಾರೋಹಳ್ಳಿ ಚಂದ್ರು ಪ್ರವಾಸ್ತಾವಿಕವಾಗಿ ಮಾತನಾಡಿದರು.

ಇದೇ ವೇಳೆ ತುರ್ತು ಪರಿಸ್ಥಿತಿ ಸಂದರ್ಭದ ಹೋರಾಟದಲ್ಲಿ ಜೈಲು ಸೇರಿದ್ದ ವಾಗಡಿಯ ಬಿ.ಸಿ. ಗಂಗಾಧರ್ , ಶೇಷಾದ್ರಿ ಹಾಗೂ ಬಿಡದಿಯ ಶ್ರೀನಿವಾಸ ರೆಡ್ಡಿ ಅವರನ್ನು ಸನ್ಮಾನಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್. ಆನಂದಸ್ವಾಮಿ, ಮುಖಂಡರಾದ ಗೌತಮ್ ಗೌಡ, ಪ್ರಸಾದ್ ಗೌಡ, ರುದ್ರದೇವರು, ಚಂದ್ರಶೇಖರ

ಸುರೇಶ್, ಪುಷ್ಪಲತಾ, ಕೃಷ್ಣ , ಕಿರಣ್ ಕುವಾರ್, ದರ್ಶನ್, ಶ್ರೀನಿವಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net