ದಾಸಶ್ರೇಷ್ಠರ ಜೀವನಾದರ್ಶ ಮೈಗೂಡಿಸಿಕೊಳ್ಳಿ

18mlv1
ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭಕ್ತ ಕನಕದಾಸರ 597ನೇ ಜಯಂತಿ ಕಾರ್ಯಕ್ರಮವನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಉದ್ಘಾಟಿಸಿದರು. ಬಿ.ವಿ.ಕುಮಾರ್, ಉಮಾ, ಆರ್.ಎನ್.ವಿಶ್ವಾಸ್, ಚಂದ್ರಕುಮಾರ್, ಚಿಕ್ಕಲಿಂಗಯ್ಯ, ಸಿ.ಮಾದು, ದೊಡ್ಡಯ್ಯ, ಸಿ.ಪಿ.ರಾಜು, ಮಲ್ಲಿಕಾರ್ಜುನಯ್ಯ, ಪುಟ್ಟಬಸವಯ್ಯ, ಮಹದೇವು, ನಾಗರಾಜು ಇದ್ದರು.
Published on

ಮಳವಳ್ಳಿ: ಶೂದ್ರ ವರ್ಗದಲ್ಲಿ ಜನಿಸಿ ನಾಡಿನ ಬ್ರಾಹ್ಮಣ್ಯದ ಲೋಕದಲ್ಲಿ ತಿಮ್ಮಪ್ಪನ ದೈವಭಕ್ತನಾಗಿ ಲೋಕ ಕಲ್ಯಾಣಕ್ಕಾಗಿ ತನ್ನನ್ನೇ ಅರ್ಪಣೆ ಮಾಡಿಕೊಂಡ ಭಕ್ತ ಕನಕದಾಸರ ತತ್ವಗಳು ಇಂದು ಪ್ರಸ್ತುತವಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಭಕ್ತ ಕನಕದಾಸರ 537 ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನಕದಾಸರು ತಮ್ಮ ಚಿಂತನೆಯನ್ನು ಸಮಾಜಕ್ಕೆ ಕೊಟ್ಟು ಹೋದ ದಾರ್ಶನಿಕ ಕವಿ ಹಾಗೂ ಸಂತನಾಗಿ ಸಮಾಜ ಸುಧಾರಕ, ತತ್ವಜ್ಞಾನಿ ಆಗಿದ್ದರು. ಕನಕದಾಸರ ಜೀವನಾದರ್ಶಗಳನ್ನು ಪ್ರಸ್ತುತ ಯುವ ಪೀಳಿಗೆ ಮೈಗೂಡಿಸಿಕೊಂಡರೆ ಸಮಸಮಾಜದ ಸುಧಾರಣೆಗೆ ಸಹಕಾರಿಯಾಗಲಿದೆ ಎಂದರು.

ಜನಸಾಮಾನ್ಯರಿಗೂ ಅರಿವಾಗುವ ರೀತಿಯಲ್ಲಿ ಸರಳ ಭಾಷೆಯನ್ನು ಬಳಸಿ ಕೃತಿಗಳನ್ನು ಕನಕದಾಸರು ಸಾಹಿತ್ಯದ ವಿವಿಧ ಕೀರ್ತನೆಗಳ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು. ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎನ್ನುವ ಅದ್ಭುತ ಸಂದೇಶವನ್ನು ಕನಕದಾಸರು ನಮಗೆ ನೀಡಿದ್ದು, ಜಾತಿ ಪದ್ಧತಿಯನ್ನು ಇಟ್ಟುಕೊಂಡು ಕನಕದಾಸರನ್ನು ಆರಾಧಿಸುವುದು ವಿರೋಧಾಭಾಸವಾಗುತ್ತದೆ. ಜಾತ್ಯತೀತವಾಗಿ ದಾಸಶ್ರೇಷ್ಠರನ್ನು ಗೌರವಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮಕ್ಕೂ ಮುನ್ನ ತಾಲೂಕು ಪಂಚಾಯಿತಿ ಬಳಿಯಿಂದ ಬೆಳ್ಳಿಸಾರೋಟಿನಲ್ಲಿ ಕನದಾಸರ ಭಾವಚಿತ್ರವನ್ನಿರಿಸಿ ವಿವಿಧ ಜನಪದ ಕಲಾತಂಡಗಳೊಡನೆ ಮೆರವಣಿಗೆ ನಡೆಸುವ ಮೂಲಕ ವೇದಿಕೆ ಬಳಿಗೆ ಬರಲಾಯಿತು.

ತಹಸೀಲ್ದಾರ್ ಬಿ.ವಿ.ಕುಮಾರ್, ಬಿಇಒ ಉಮಾ, ಜಿಪಂ ಮಾಜಿ ಸದಸ್ಯರಾದ ಆರ್.ಎನ್.ವಿಶ್ವಾಸ್, ಚಂದ್ರಕುಮಾರ್, ತಾಪಂ ಮಾಜಿ ಅಧ್ಯಕ್ಷ ಚಿಕ್ಕಲಿಂಗಯ್ಯ, ಮಾಜಿ ಉಪಾಧ್ಯಕ್ಷ ಸಿ.ಮಾದು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೊಡ್ಡಯ್ಯ, ಸಿ.ಪಿ.ರಾಜು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಮುಖಂಡರಾದ ಪುಟ್ಟಬಸವಯ್ಯ, ಮಹದೇವು, ನಾಗರಾಜು ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net