

ಬೆಂಗಳೂರು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ) ವಿಶಾಖಪಟ್ಟಣ ಎಕ್ಸಿಕ್ಯೂಟಿವ್ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೆಷನ್ (ಇಎಂಬಿಎ) ಕೋರ್ಸ್ ಆರಂಭಿಸಿದೆ. ಈ ಕೋರ್ಸ್ ಮ್ಯಾನೇಜ್ ಮೆಂಟ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ವೃತ್ತಿಪರರನ್ನು ಮತ್ತಷ್ಟು ಬಲಗೊಳಿಸುವ ಉದ್ದೇಶವನ್ನು ಹೊಂದಿದ್ದು, ಅವರನ್ನು ಅಭಿವೃದ್ಧಿ ಹೊಂದುತ್ತಿರುವ ಬಿಸಿನೆಸ್ನಲ್ಲಿನ ನಾಯಕತ್ವದ ಹುದ್ದೆ ವಹಿಸಿಕೊಳ್ಳಲು ಸಿದ್ಧಗೊಳಿಸಲಿದೆ.
ಕೋರ್ಸ್ ಕಲಿಯುವವರಿಗೆ ಸಮಗ್ರ ಮ್ಯಾನೇಜ್ಮೆಂಟ್ ತಂತ್ರಗಳನ್ನು ಕಲಿಯಲು ಮತ್ತು ಆ ಗುಣವನ್ನು ಬೆಳೆಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಹೊಸಕಾಲದ ಮ್ಯಾನೇಜ್ಮೆಂಟ್ ತಂತ್ರಗಳ ಆಳವಾದ ತಿಳುವಳಿಕೆ ಒದಗಿಸುತ್ತದೆ. ಯಾವುದೇ ಸಂಸ್ಥೆಯ ನಾಯಕತ್ವವನ್ನು ವಹಿಸಿಕೊಳ್ಳಲು ಈ ಗುಣಗಳು ಬಹಳ ಮುಖ್ಯವಾಗಿವೆ. ಈ ಕೋರ್ಸ್ ಅದ್ಭುತ ಕಲಿಕಾ ಅನುಭವ ಒದಗಿಸಲಿದ್ದು, ನವೀನ ಚಿಂತನೆಯನ್ನು ಮತ್ತು ವಿಶಿಷ್ಟ ದೃಷ್ಟಿಕೋನವನ್ನು ಹೊಂದಲು ನೆರವಾಗುತ್ತದೆ. ವಿದ್ಯಾರ್ಥಿಗಳು ಪಠ್ಯದಲ್ಲಿರುವ ವಿಚಾರಗಳನ್ನು ಬಿಸಿನೆಸ್ ಸಂಬಂಧಿತ ಪ್ರಾಯೋಗಿಕ ಸನ್ನಿವೇಶಗಳಲ್ಲಿ ಅಳವಡಿಸಿಕೊಳ್ಳುವ ಅವಕಾಶ ಪಡೆಯುತ್ತಾರೆ. ಇವತ್ತಿನ ಜಾಗತಿಕ ಆರ್ಥಿಕತೆಯ ಸಂಕೀರ್ಣ ಸವಾಲು ಎದುರಿಸಲು ಸಜ್ಜಾಗಲಿದ್ದಾರೆ.
ವೇಗವಾಗಿ ಬದಲಾಗುತ್ತಿರುವ ಬಿಸಿನೆಸ್ ಜಗತ್ತಿನಲ್ಲಿ ಮ್ಯಾನೇಜರ್ಗಳು ವೃತ್ತೀಜಿವನದಲ್ಲಿ ಮೇಲೇರಲು ಅಥವಾ ಪ್ರಸ್ತುತವಾಗಿ ಉಳಿಯಲು ಕೌಶಲಾಭಿವೃದ್ಧಿ ಮಾಡಿಕೊಳ್ಳುವುದು ಬಹಳ ಅವಶ್ಯವಾಗಿದೆ. 2015 ರಿಂದ ಶೇ.25ರಷ್ಟು ಹುದ್ದೆಗಳಿಗೆ ಅವಶ್ಯ ಇರುವ ಕೌಶಲಗಳು ಬದಲಾಗುತ್ತವೆ. 2030ರ ವೇಳೆಗೆ ಆ ಹುದ್ದೆಗಳ ಸಂಖ್ಯೆ ಶೇ.65ಕ್ಕೆ ತಲುಪುವ ನಿರೀಕ್ಷೆ ಇದೆ. ಹಾಗಾಗಿ ಕೌಶಲಾಭಿವೃದ್ಧಿ ಬಹಳ ಮುಖ್ಯ ಎಂದು 10ರಲ್ಲಿ 9 ಮಂದಿ ಎಕ್ಸಿಕ್ಯೂಟಿವ್ಗಳು ನಂಬಿಕೊಂಡಿದ್ದಾರೆ ಎಂದು ಲಿಂಕ್ಡ್ಇನ್ ಸಮೀಕ್ಷಾ ವರದಿ ತಿಳಿಸಿದೆ. ಜಾಗತಿಕ ಎಂಬಿಎ ಶಿಕ್ಷಣ ಮಾರುಕಟ್ಟೆಯ ಸಿಎಜಿಆರ್ 2023ರಿಂದ 2032ರವರೆಗೆ ಶೇ.15.6ಕ್ಕೆ ಬೆಳೆಯಲಿದ್ದು, 2032ರ ವೇಳೆಗೆ 83.08 ಶತಕೋಟಿ ಯುಎಸ್ ಡಾಲರ್ ಮೌಲ್ಯದವರೆಗೆ ತಲುಪುವ ನಿರೀಕ್ಷೆ ಹೊಂದಲಾಗಿದೆ.