

ಬೆಂಗಳೂರು: ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ 402 ಹುದ್ದೆಗಳ ನೇಮಕಾತಿಗೆ ಗುರುವಾರ ಲಿಖಿತ ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಬೆಂಗಳೂರು, ವಿಜಯಪುರ, ಶಿವಮೊಗ್ಗ, ಕಲಬುರಗಿ, ಧಾರವಾಡ ಮತ್ತು ದಾವಣಗೆರೆ ನಗರಗಳಲ್ಲಿ 163 ಪರೀಕ್ಷಾ ಕೇಂದ್ರಗಳ ವ್ಯವಸ್ಥೆ ಮಾಡಲಾಗಿತ್ತು. ಬೆಂಗಳೂರಿನಲ್ಲಿ 21,875 ಅಭ್ಯರ್ಥಿಗಳು ಸೇರಿ ಒಟ್ಟಾರೆ 43,250 ಮಂದಿ ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಮಲ್ಲೇಶ್ವರದ ಕೆಇಎ ಪ್ರಧಾನ ಕಚೇರಿಗೆ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಶರತ್ ಚಂದ್ರ, ಡಿಐಜಿ ಸುಧೀರ್ ಕುಮಾರ್ ರೆಡ್ಡಿ ಭೇಟಿ ನೀಡಿ ಮಾನಿಟರಿಂಗ್ ಸೆಂಟರ್ ಪರಿಶೀಲಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ಎದುರಾಗಿದ್ದ ಸಣ್ಣ-ಪುಟ್ಟ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದು ಶರತ್ ಚಂದ್ರ ತಿಳಿಸಿದರು.
ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಮಾತನಾಡಿ, 66,990 ಮಂದಿ ಪರೀಕ್ಷೆಗೆ ಅರ್ಹರಾಗಿದ್ದರು. ಈ ಪೈಕಿ 56,528 ಮಂದಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡಿದ್ದರು. ಅಂತಿಮವಾಗಿ 43,250 ಮಂದಿ ಪರೀಕ್ಷೆಗೆ (ಶೇ 64.5) ಹಾಜರಾಗಿದ್ದರು ಎಂದರು.
ವಿಜಯಪುರ, ಕಲುಬುರಗಿ ಕೇಂದ್ರಗಳ ಸುತ್ತ ಮತ್ತು ಪ್ರಶ್ನೆಪತ್ರಿಕೆ ಸಂಗ್ರಹಿಸಿದ್ದ ಕೇಂದ್ರಗಳಲ್ಲಿ ಜಾಮರ್ ಅಳವಡಿಸಲಾಗಿತ್ತು. ಪ್ರಶ್ನೆ ಪತ್ರಿಕೆಗಳ ಸಂಗ್ರಹಕ್ಕೆ ಡಿಜಿಟಲ್ ಲಾಕರ್ ಬಳಕೆ ಮಾಡಿದ್ದು, ಪರೀಕ್ಷೆ ಶುರುವಾಗುವ 1 ಗಂಟೆ ಮೊದಲು ಪ್ರಾಂಶುಪಾಲಕರಿಗೆ ಪಾಸ್ ವರ್ಡ್ ಶೇರ್ ಮಾಡಲಾಗಿತ್ತು. ಅಭ್ಯರ್ಥಿಗಳ ೆಟೋ ಮತ್ತು ಬೆರಳಚ್ಚು ಸಂಗ್ರಹಿಸಿ ಅಸಲಿ ಅಥವಾ ಬದಲಿ ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಅಕ್ರಮ ತಡೆಗಟ್ಟುವ ಸಲುವಾಗಿ ಐಎಎಸ್ ಅಧಿಕಾರಿಗಳಿಗೆ ಉಸ್ತುವಾರಿ ವಹಿಸಲಾಗಿತ್ತು. ಡಿಸಿ, ಎಸ್‌ಪಿಗಳನ್ನು ಸ್ಕಾ ್ವಡ್ ಆಗಿ ಕಳುಹಿಸಲಾಗಿತ್ತು ಎಂದು ಪ್ರಸನ್ನ ಮಾಹಿತಿ ನೀಡಿದರು.