

> ಸೋಲಾರ್ ಫೆನ್ಸ್ ಮುರಿದು ಚಿಕ್ಕಮಣ್ಣುಗುಡ್ಡೆ ಅರಣ್ಯದಲ್ಲಿ ಬೀಡು ಬಿಟ್ಟ ಆನೆ ಹಿಂಡು
> ರಾಗಿ, ಭತ್ತ ಬೆಳೆ ಹಾನಿ > ಅರಣ್ಯ ಇಲಾಖೆಗೆ ಸವಾಲಾದ ಕಾರ್ಯಾಚರಣೆ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಆಗೊಮ್ಮೆ ಈಗೊಮ್ಮೆ ಬಂಧುಗಳ ರೀತಿ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿ ಒಂದೆರಡು ಆನೆಗಳು ಲಗ್ಗೆ ಇಡುತ್ತಿದ್ದವು. ಆದರೆ, ಈಗ ಹಿಂಡು ಹಿಂಡು ಆನೆಗಳು ಬೀಡುಬಿಟ್ಟಿರುವುದು ಅರಣ್ಯ ಇಲಾಖೆ ಹಾಗೂ ಈ ಭಾಗದ ರೈತರಿಗೆ ಬಹು ದೊಡ್ಡ ತಲೆನೋವು ತಂದಿಟ್ಟಿವೆ.
ಕಾವೇರಿ ವನ್ಯಜಿವಿಧಾಮದಿಂದ ನೇರವಾಗಿ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದತ್ತ ಹಿಂಡು ಹಿಂಡು ಆನೆಗಳು ಮುಖಮಾಡಿವೆ. ಏಳೆಂಟು ಆನೆಗಳು ಅರಣ್ಯದಲ್ಲಿ ವಾರದಿಂದ ಬೀಡುಬಿಟ್ಟಿದ್ದು, ಹೋದ ಬಂದ ದಾರಿಯಲ್ಲಿ ರಾಗಿ, ಭತ್ತದ ಬೆಳೆ ನಾಶ ಮಾಡುವ ಜತೆಗೆ ದಾರಿ ಹೋಕರಿಗೆ ಭಯ ಮೂಡಿಸಿವೆ.
ಕಾವೇರಿ ವನ್ಯಜಿವಿಧಾಮದಿಂದ ತೆಂಗಿನಕಲ್ಲು ಅರಣ್ಯಕ್ಕೆ ಬಂದು ಕಾರ್ಯಾಚರಣೆಯಲ್ಲಿ ಮೂಲಸ್ಥಾನಕ್ಕೆ ವಾಪಸಾಗುತ್ತಿದ್ದವು. ಕೆಲವೊಂದು ಸಂದರ್ಭದಲ್ಲಿ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶಕ್ಕೆ ಬರುತ್ತಿದ್ದವು. ಆದರೆ, ಈಗ ಆನೆಗಳ ಪಥ ಬದಲಾವಣೆ ಆದಂತೆ ತೋರುತ್ತಿದೆ. ನಿಯಂತ್ರಣಕ್ಕೆ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿ ಸೋಲಾರ್ ಫೆನ್ಸ್ ಮಾಡಲಾಗಿದೆ. ಆದರೆ, ಅದನ್ನು ಮುರಿದು ಒಳನುಗ್ಗಿ ಎಗ್ಗಿಲ್ಲದೆ ಬಂದು ಸೇರುತ್ತಿವೆ.
ರಾತ್ರಿಯಾದರೆ ಅರಣ್ಯದಿಂದ ಹೊರಬಂದು ದೇವರದೊಡ್ಡಿ, ಕುಂಭಾಪುರ, ಅಂಜನಾಪುರ, ಕುಂಭಾಪುರ ಕಾಲನಿ, ಕೀರನಕಲ್ ದೊಡ್ಡಿ, ತಿಮ್ಮಯ್ಯನದೊಡ್ಡಿ, ವಿಭೂತಿಕೆರೆ, ಆಲೇಮರದೊಡ್ಡಿ, ಬನ್ನಿಕುಪ್ಪೆ ಸೇರಿ ಹಲವು ಗ್ರಾಮಗಳಿಗೆ ಲಗ್ಗೆ ಇಟ್ಟು ಬೆಳೆಯನ್ನು ನಾಶಮಾಡುತ್ತಿವೆ.
ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶಕ್ಕೆ ಹಿಂಡು ಹಿಂಡಾಗಿ ಲಗ್ಗೆ ಹಾಕುವ ಆನೆಗಳು ರೈತರಲ್ಲಿ ಹೊಸ ಆತಂಕ ಸೃಷ್ಟಿಸಿವೆ. ಆನೆಗಳ ಉಪಟಳದಿಂದ ತೆಂಗಿನಕಲ್ಲು ಭಾಗದಲ್ಲಿ ಈಗಾಗಲೇ ನೂರಾರು ರೈತರು ಕೃಷಿಯಿಂದ ಹಿಂದೆ ಸರಿದಿದ್ದಾರೆ. ಇದೇ ರೀತಿ ಆನೆಗಳು ಚಿಕ್ಕಮಣ್ಣುಗುಡ್ಡೆ ಅರಣ್ಯದಲ್ಲೇ ಠಿಕಾಣಿ ಹೂಡಿದರೆ ಮುಂದೊಂದು ದಿನ ರೈತರು ಮತ್ತು ಅರಣ್ಯ ಇಲಾಖೆ ನಡುವೆ ಸಂರ್ಷಕ್ಕೆ ಎಡೆ ಮಾಡಿಕೊಡುತ್ತದೆ ಎನ್ನುತ್ತಾರೆ ಸಾರ್ವಜನಿಕರು.
ಬೆಳೆ ನಾಶ ಒಂದು ಕಡೆಯಾದರೆ, ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶಕ್ಕೆ ಬಂದ ಆನೆಗಳು ಅಂಜನಾಪುರ ಮುಖಾಂತರ ಹಂದಿಗೊಂದಿ ಅರಣ್ಯ ಸೇರುತ್ತವೆ. ಹೀಗೆ ಹೋಗುವಾಗ ಅಂಜನಾಪುರ& ವಿಭೂತಿಕೆರೆ& ಬನ್ನಿಕುಪ್ಪೆ, ಕನಕಪುರ& ರಾಮನಗರ ಪ್ರಮುಖ ರಸ್ತೆಗಳನ್ನು ದಾಟಿ ಹೋಗುತ್ತವೆ. ಇತ್ತೀಚೆಗೆ ಆನೆಗಳು ಪ್ರತಿದಿನ ರಸ್ತೆ ದಾಟುತ್ತಿದ್ದು, ರಸ್ತೆಯಲ್ಲಿ ಸಂಚಾರ ಮಾಡುವವರಿಗೆ ಭಯ ತರಿಸಿದೆ. ಕೂಡಲೇ ಅರಣ್ಯ ಇಲಾಖೆ ಆನೆಗಳನ್ನು ನಿಯಂತ್ರಿಸಬೇಕು.> ಗೌರಿಶಂಕರ್, ವಿಭೂತಿಕೆರೆಕಾರ್ಯಾಚರಣೆಯಲ್ಲಿ ಹೊರ ಹೋದರೂ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದ ಸುತ್ತಮುತ್ತಲಲ್ಲಿ ಬೆಳೆದಿರುವ ರಾಗಿ ಫಸಲಿನ ಆಸೆಗಾಗಿ ಸುತ್ತಿ ಬಳಸಿ ಮತ್ತೆ ಮತ್ತೆ ವಾಪಸ್ ಬರುತ್ತಿವೆ. ಜನರಿಗೆ ಆನೆಗಳ ಬಗ್ಗೆ ಮಾಹಿತಿ ಸೇರಿ ರಸ್ತೆ ದಾಟುವ ಸೂಕ್ತ ಪ್ರಮುಖ ರಸ್ತೆಗಳಲ್ಲಿ ನಮ್ಮ ಸಿಬ್ಬಂದಿಗೆ ಇವುಗಳ ಓಡಾಟದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಪ್ರತಿ ದಿನ ಆನೆಗಳ ಚಲನವಲನದ ಮೇಲೆ ನಿಗಾ ಇಟ್ಟು ಕಾರ್ಯಾಚರಣೆ ನಡೆಸಲಾಗುತ್ತಿದೆ.> ಮಲ್ಲೇಶ್, ವಲಯ ಅರಣ್ಯಾಧಿಕಾರಿ, ಚನ್ನಪಟ್ಟಣಪ್ರತಿದಿನ ತೆಂಗಿನಕಲ್ಲು, ಚಿಕ್ಕಮಣ್ಣುಗುಡ್ಡೆ, ಹಂದಿಗೊಂದಿ ಅರಣ್ಯ ಪ್ರದೇಶದಿಂದ ಆನೆಗಳನ್ನು ಬಿಡುವಿಲ್ಲದಂತೆ ಗ್ರಾಮಗಳ ಕಡೆ ಮುಖ ಮಾಡದಂತೆ ಸ್ವ&ಸ್ಥಾನದತ್ತ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಾವೇರಿಗಿಂತ ಈ ಭಾಗದಲ್ಲಿ ಹುಲುಸಾದ ಆಹಾರ ಸಿಗುತ್ತಿರುವುದೇ ಆನೆಗಳು ವಾಪಸಾಗಲು ಕಾರಣವಾಗುತ್ತಿದೆ. ನರೀಕಲ್ಲುಗುಡ್ಡದವರೆಗೆ ಹೋಗುವ ಆನೆಗಳು ಕಾವೇರಿಯತ್ತ ಮುಖಮಾಡದೆ ಮತ್ತೆ ವಾಪಸಾಗುತ್ತಿದ್ದು, ಇಲಾಖೆಗೆ ಆನೆಗಳ ಕಾರ್ಯಾಚರಣೆಯೇ ದೊಡ್ಡ ಸವಾಲಾಗಿದೆ.ಎಂ. ರಾಮಕೃಷ್ಣಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ, ರಾಮನಗರ.