ಆನೆಗಳನ್ನು ಕಾಡಿಗಟ್ಟುವಾಗ ಆಕಸ್ಮಿಕವಾಗಿ ಫಾರೆಸ್ಟ್​ ವಾಚರ್​ ಸಾವು

Death
Published on

ಮಂಡ್ಯ: ಆನೆಗಳನ್ನು ಕಾಡಿಗಟ್ಟುವಾಗ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿ ಫಾರೆಸ್ಟ್​ ವಾಚರ್​ ಸಾವಿಗೀಡಾಗಿರುವ ಘಟನೆ ಮಳವಳ್ಳಿ ತಾಲೂಕಿನ ಕೂನನಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಹೊರಗುತ್ತಿಗೆ ಆಧಾರಿತ ಫಾರೆಸ್ಟ್ ವಾಚರ್ ಆಗಿ ಶಿವನಂಜಯ್ಯ(30) ಎಂಬುವರು ಕೆಲಸ ಮಾಡುತ್ತಿದ್ದರು. ಕೂನನಕೊಪ್ಪಲು ಗ್ರಾಮದ ಬಳಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗೆ ಓಡಿಸುವಾಗ ಫಾರೆಸ್ಟ್ ಗಾರ್ಡ್ ಪ್ರಕಾಶ್ ಅಡಚದ ಎಂಬುವರ ಬಂದೂಕಿನಿಂದ ಆಕಸ್ಮಿಕವಾಗಿ ಹಾರಿದ ಗುಂಡು ಶಿವನಂಜಯ್ಯರಿಗೆ ತಗುಲಿ ಮೃತಪಟ್ಟಿದ್ದಾರೆ.

ಶಿಂಷಾ ಅರಣ್ಯ‌ ಪ್ರದೇಶದಿಂದ ಹತ್ತು ಕಾಡಾನೆಗಳು ಗ್ರಾಮಕ್ಕೆ ಆಗಮಿಸಿದ್ದವು. ಶಬ್ದ ಮಾಡಿ ಕಾಡಿಗೆ ಓಡಿಸುತ್ತಿದ್ದ ವೇಳೆ ಆನೆಗಳು ಸಿಬ್ಬಂದಿಗಳನ್ನೇ ಹಿಮ್ಮೆಟ್ಟಿಸಿವೆ. ಈ ವೇಳೆ ಸಿಬ್ಬಂದಿ ಭಯದಿಂದ ಓಡುವಾಗ ಆಕಸ್ಮಿಕವಾಗಿ ಫಾರೆಸ್ಟ್ ಗಾರ್ಡ್ ಬಂದೂಕಿನಿಂದ ಗುಂಡು ಹಾರಿದೆ. ಈ ಸಂಬಂಧ ಮಳವಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net