

ಕನಕಪುರ: ತಾಲೂಕಿನ ಕಾವೇರಿ ವನ್ಯಜೀವಿ ವಿಭಾಗದ ಮುಗ್ಗೂರು ಅರಣ್ಯ ಪ್ರದೇಶದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಕಾಡಾನೆ ಚಿಕಿತ್ಸೆ ಫಲಕಾರಿಯಾಗಿದೆ ಗುರುವಾರ ಬೆಳಿಗ್ಗೆ ಸಾವನ್ನಪ್ಪಿದೆ.
ಕಳೆದ ಎರಡು ದಿನಗಳ ಹಿಂದೆ ತೀವ್ರ ನಿತ್ರಾಣಗೊಂಡಿದ್ದ 40 ವರ್ಷದ ಗಂಡಾನೆ ತೀವ್ರ ಅನಾರೋಗ್ಯದಿಂದ ಬಳಲುತ್ತಾ ಕಾಡಿನೊಳಗೆ ಮರದ ಕೆಳಗೆ ನಿಂತಿದ್ದ ಅದರ ಚಲನವಲನಗಳನ್ನು ಗಮನಿಸಿದ ಮುಕ್ಕೂರು ವಲಯ ಅರಣ್ಯ ಅಧಿಕಾರಿ ರಾಜೇಂದ್ರ ಸ್ವಾಮಿ ಹಾಗೂ ಸಿಬ್ಬಂದಿಗಳು ಸ್ಥಳೀಯ ವೈದ್ಯರಿಂದ ಚಿಕಿತ್ಸೆ ನೀಡಿ ನಂತರ ಅವರ ಸಲಹೆ ಮೇರೆಗೆ ಬನ್ನೇರುಘಟ್ಟ ಹಿರಿಯ ಪಶು ವೈದ್ಯ ಡಾ. ಕಿರಣ್ ಹಾಗೂ ಹಲಸೂರು ಪಶು ವೈದ್ಯಾಧಿಕಾರಿ ಗಿರೀಶ್ ಅವರಿಂದ ಚಿಕಿತ್ಸೆ ನೀಡಲಾಗಿತ್ತು ಗುರುವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಕಾಡಾನೆ ಮೃತಪಟ್ಟಿದೆ.
ವೈದ್ಯರಿಂದ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮೃತ ಹಾನಿಯನ್ನು ಅರಣ್ಯ ಪ್ರದೇಶದ ಒಳಭಾಗದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಕೊಳ್ಳೇಗಾಲ ಡಿ ಎಫ್ ಓ ಸುರೇಂದ್ರ ಎಸಿ ಎಫ್ ನರೇಂದ್ರಸ್ವಾಮಿ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.