ಆಲೆಟ್ಟಿಯಲ್ಲಿ ಆನೆ ದಾಳಿ, ಬೆಳೆ ನಾಶ

elephant-1
Published on

ಸುಳ್ಯ: ತಾಲೂಕಿನ ಆಲೆಟ್ಟಿ ಗ್ರಾಮದ ಹಲವು ಕಡೆ ಕಾಡಾನೆಗಳ ದಾಳಿ ನಿರಂತರವಾಗಿದ್ದು, ಕೃಷಿಕರ ಕೃಷಿ ಬೆಳೆ ನಾಶವಾಗುತ್ತಿದೆ.ಶನಿವಾರ ತಡರಾತ್ರಿ ತುದಿಯಡ್ಕ ಕೃಪಾಶಂಕರ, ಗುಡ್ಡೆಮನೆ ಪುರುಷೋತ್ತಮ, ಕೇಶವ, ಜಯನಾಥ, ಚೆನ್ನಕೇಶವ ಎಂಬುವರ ತೋಟಗಳಿಗೆ ಕಾಡಾನೆಗಳ ಹಿಂಡು ದಾಳಿ ನಡೆಸಿ ಬೆಳೆಗಳನ್ನು ಪುಡಿಗೈದಿವೆ. ಈ ಭಾಗದಲ್ಲಿ ಕೃಷಿಕರು ಆನೆಗಳ ಉಪಟಳದಿಂದಾಗಿ ಕೃಷಿಯನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಿಂದ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net