ಕಾಡಾನೆ ದಾಳಿಗೆ ರೈತ ಬಲಿ

elephant 1
Published on

ರಾಮನಗರ:

 ಆನೆ ತುಳಿದು  ರೈತರು ಒಬ್ಬರು ಮೃತಪಟ್ಟಿರುವ ಘಟನೆ ಕನಕಪುರ ತಾಲೂಕು ಆನೆಕೆರೆ ದೊಡ್ಡಿ ಬಳಿ ಭಾನುವಾರ ಮುಂಜಾನೆ ನಡೆದಿದೆ.

 ಗ್ರಾಮದ ತಿಮ್ಮಯ್ಯ( 63 ) ಮೃತಪಟ್ಟ ವ್ಯಕ್ತಿ. ರೇಷ್ಮೆ ಕೃಷಿ ಮಾಡುತ್ತಿದ್ದ ತಿಮ್ಮಯ್ಯ,  ಗ್ರಾಮದ ಪಕ್ಕಕ್ಕೆ ರೇಷ್ಮೆ ಹುಳುವಿನ ಮನೆಯನ್ನು ಹೊಂದಿದ್ದು,  ಮುಂಜಾನೆ ಎದ್ದು ರೇಷ್ಮೆ ಹುಳುವಿಗೆ ಸೊಪ್ಪು ಹಾಕಿ ವಾಪಸ್  ಮನೆಗೆ ಬರುವ ವೇಳೆ ಬೆಳಗ್ಗೆ ಸುಮಾರು ಐದು ಗಂಟೆ ವೇಳೆಯಲ್ಲಿ ಆನೆ ದಾಳಿ ನಡೆಸಿದೆ. 

ಆನೆ ದಾಳಿಗೆ  ತಿಮ್ಮಯ್ಯ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳ  ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಗೆ ಒಳಪಟ್ಟಿದ್ದು ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಕೂಡಲೇ ಬರಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ . 

ಆನೆ ದಾಳಿ ನಿಯಂತ್ರಣಕ್ಕೆ ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅರಣ್ಯ ಇಲಾಖೆ ಹೇಳುತ್ತಿದೆಯಾದರೂ ದಾಳಿಗಳು ಮಾತ್ರ ನಿರಂತರವಾಗಿ ಮುಂದುವರಿಯುತ್ತಲೇ ಇದ್ದು ಇದೀಗ ಮತ್ತೊಬ್ಬ ರೈತ ಸಾವನ್ನಪ್ಪಿರುವುದು ರೈತ ವಲಯದಲ್ಲಿ ಆತಂಕವನ್ನ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net