

ಕೈಲಾಂಚ : ಹೋಬಳಿಯ ಹುಣಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಂಬೇನಹಳ್ಳಿಯಲ್ಲಿ ಎರಡು ಆನೆಗಳು ಶುಕ್ರವಾರ ರಾತ್ರಿ ದಾಳಿ ನಡೆಸಿ ತೆಂಗು, ಮಾವಿನಮರ, ಸೀಮೆಹುಲ್ಲು, ನೀರಾವರಿ ಪರಿಕರ ನಾಶ ಪಡಿಸಿವೆ.
ಕಳೆದ ತಿಂಗಳಿಂದ ಹಂದಿಗೊಂದಿ ಅರಣ್ಯದಲ್ಲಿ ಬೀಡು ಬಿಟ್ಟಿರುವ ಎರಡು ಆನೆಗಳು ಅರಣ್ಯದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಓಡಾಟ ನಡೆಸುತ್ತಾ ರೈತರ ಜಮೀನನಲ್ಲಿ ಬೆಳೆದ ತೆಂಗು, ಮಾವಿನ ಮರ ನಾಶಪಡಿಸುತ್ತಿದೆ. ಹೆಚ್ಚಾಗಿ ತೆಂಗು ಮರಗಳನ್ನೇ ನೆಲಕಚ್ಚಿಸುತ್ತಿದೆ. ಕೂಡಲೇ ಆರಣ್ಯ ಇಲಾಖೆ ಆನೆಗಳನ್ನು ಸ್ವಸ್ಥಾನಕ್ಕೆ ಕಾರ್ಯಾಚರಣೆ ನಡೆಸಬೇಕೆಂದು ರೈತರು ಆಗ್ರಹಿಸಿದ್ದಾರೆ.