

ಸುಳ್ಯ: ತಾಲೂಕಿನ ಆಲೆಟ್ಟಿ ಗ್ರಾಮದ ಕೆಲವೆಡೆ ರೈತರ ಕೃಷಿ ತೋಟಗಳಿಗೆ ನುಗ್ಗಿದ ಕಾಡಾನೆ ಹಿಂಡು ಕೃಷಿ ಧ್ವಂಸ ಮಾಡಿದೆ. ಕೆಲವು ದಿನಗಳ ಹಿಂದೆ ನಾರ್ಕೋಡು-ಕೋಲ್ಚಾರು ರಸ್ತೆ ಮಧ್ಯೆ ಬಿಲ್ಲರಮಜಲು ಎಂಬಲ್ಲಿ ಕಾಡಾನೆಗಳ ಹಿಂಡು ರಸ್ತೆ ದಾಟುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಆಗಿತ್ತು. ಬುಧವಾರ ರಾತ್ರಿ ಮತ್ತೆ ಕುಂಭಕೋಡು ಭಾಗದಲ್ಲಿ ಕಾಣಿಸಿಕೊಂಡ ಆನೆಗಳು ವಕೀಲ ಸತೀಶ್ ಕುಂಭಕೋಡು ಅವರ ತೋಟಕ್ಕೆ ನುಗ್ಗಿ ಕೃಷಿ ಬೆಳೆಗಳನ್ನು ನಾಶ ಪಡಿಸಿದೆ.