ವಿದ್ಯುತ್ ದರ ಏರಿಕೆಗೆ ಚೇಂಬರ್ ಆಫ್ ಕಾಮರ್ಸ್ ಆಕ್ರೋಶ

Electricity, Rate, Rise, Chamber of Commerce,
Published on

ಚಳ್ಳಕೆರೆ: ವಿದ್ಯುತ್ ದರ ಏರಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಚಳ್ಳಕೆರೆಯ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಪದಾಧಿಕಾರಿಗಳು ಈ ಕೂಡಲೇ ದರ ಹೆಚ್ಚಳ ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ.

ಈ ಸಂಬಂಧ ಪದಾಧಿಕಾರಿಗಳು ತಹಸೀಲ್ದಾರ್ ರೇಹಾನ್ ಪಾಷಾ ಅವರಿಗೆ ಗುರುವಾರ ಮನವಿ ಸಲ್ಲಿಸಿ, ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳ ಹಿತ ಕಾಯುವಂತೆ ಕೋರಿದರು.

ಏಕಾಏಕಿ ವಿದ್ಯುತ್ ದರ ಹೆಚ್ಚಳದಿಂದ ವರ್ತಕರು ಹಾಗೂ ನಾಗರಿಕರ ಮೇಲೆ ದುಷ್ಪರಿಣಾಮ ಬೀರಿದೆ. ವಿದ್ಯತ್ ಬೆಲೆ ಏರಿಸಿದ್ದರಿಂದ ಉತ್ಪಾದನಾ ವೆಚ್ಚವೂ ಏರಿದೆ. ಇದರಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ನಷ್ಟಕ್ಕೀಡಾಗಿ ಮುಚ್ಚುವ ಸ್ಥಿತಿ ತಲುಪುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.

ನಿರುದ್ಯೋಗ ಸಮಸ್ಯೆ ಉಂಟಾಗುವ ಜತೆಗೆ ಸ್ಥಿರ ಆದಾಯದ ಮಧ್ಯಮ ವರ್ಗದ ಉದ್ಯೋಗಿಗಳಿಗೆ ಆರ್ಥಿಕ ನಷ್ಟ ಆಗುತ್ತದೆ. ಹೀಗಾಗಿ ಕೈಗಾರಿಕಾ ಕ್ಷೇತ್ರದ ರಕ್ಷಣೆಗೆ ಆದ್ಯತೆ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಚೇಂಬರ್ ಆಫ್ ಕಾಮರ್ಸ್ ಪದಾಧಿಕಾರಿಗಳಾದ ವಂದನಾರಾಜು, ಶಿವಕುಮಾರ್, ಲೋಕೇಶ್, ಚಿದಾನಂದಪ್ಪ, ಶಿವಣ್ಣ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net