

ಬಂಕಾಪುರ: ಬೋರ್ವೆಲ್ ಚಾಲು ಮಾಡಲು ಹೋದ ರೈತನಿಗೆ ವಿದ್ಯುತ್ ಪ್ರವಹಿಸಿ ಮೃತಪಟ್ಟ ಘಟನೆ ಸಮೀಪದ ಹೋತನಹಳ್ಳಿ ಗ್ರಾಮದ ಹೊಲದಲ್ಲಿ ಗುರುವಾರ ಸಂಭವಿಸಿದೆ.
ಹೋತನಹಳ್ಳಿಯ ಬಸವರಾಜ ಶಿವಪ್ಪ ಬೈಲವಾಳ (39)ಮೃತ ರೈತ. ಗುರುವಾರ ಬೆಳಗ್ಗೆ ಗೋವಿನಜೋಳದ ಫಸಲಿಗೆ ಕಳೆನಾಶಕ ಸಿಂಪಡಣೆ ಮಾಡಲು ಹೊಲಕ್ಕೆ ಹೋಗಿದ್ದಾನೆ. ಆಗ ಕಳೆನಾಶಕ ಮಿಶ್ರಣಕ್ಕೆ ನೀರಿಗಾಗಿ ಬೋರ್ವೆಲ್ ಚಾಲು ಮಾಡಲು ಹೋದಾಗ ಅವಘಡ ಸಂಭವಿಸಿದೆ ಎಂದು ಮೃತನ ಸಂಬಂಧಿಕರು ಮಾಹಿತಿ ನೀಡಿದ್ದಾರೆ.
ಕೆಇಬಿ ಅಧಿಕಾರಿಗಳು ಹಾಗೂ ಬಂಕಾಪುರ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬಂಕಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.