

ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಿರ್ಮಾಣ ಹಂತದಲ್ಲಿರುವ ಮನೆಯ ಸೆಂಟ್ರಿAಗ್ ಕೆಲಸದ ವೇಳೆಯಲ್ಲಿ ವಿದ್ಯುತ್ ಶಾಕ್ ಹೊಡೆದು ಕಾರ್ಮಿಕ ಮೃತಪಟ್ಟ ಘಟನೆ ತಾಲೂಕಿನ ತಾವರಗೇರಾ ಗ್ರಾಮದಲ್ಲಿ ಸಂಭವಿಸಿದೆ.
ಸುನೀಲ್ ಶಿವಕುಮಾರ ಸಿಂದಗಿ ಮೃತಪಟ್ಟಿರುವ ಕಾರ್ಮಿಕ.
ಗ್ರಾಮದಲ್ಲಿ ಖುರ್ಷಿದ್ ಎಂಬುವರು ಮನೆ ನಿರ್ಮಿಸುತ್ತಿದ್ದಾರೆ. ಸೆಂಟ್ರಿAಗ್ ಹಾಕಲು ಕಬ್ಬಿಣದ ರಾಡ್ ಕತ್ತರಿಸುವಾಗ ಯಂತ್ರದ ವೈರ್ ಕಟ್ ಆಗಿದ್ದರಿಂದ ಶಾಕ್ ಹೊಡೆದು ಕೊನೆಯುಸಿರೆಳೆದಿದ್ದಾರೆ. ಅವರ ಕಟ್ಟಡದ ಗುತ್ತಿಗೆ ಪಡೆದುಕೊಂಡಿರುವ ಇಮ್ರಾನ್ ರಸೂಲ್‌ಸಾಬ್, ವಾಜೀದ್ ಪಟೇಲ್ ಹಾಗೂ ಮನೆಯ ಮಾಲೀಕರ ವಿರುದ್ಧ ದೂರು ನೀಡಲಾಗಿದೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
==