ವಿದ್ಯುತ್ ಪ್ರವಹಿಸಿ ಮೂವರ ಸಾವು

WEB 1
Published on

* ಮುಂತಕದಿರೇನಹಳ್ಳಿ ಬಳಿ ಕೃಷಿಹೊಂಡದಲ್ಲಿ ಅವಘಡ

ಚಿಂತಾಮಣಿ: ತಾಲೂಕಿನ ಕಸಬಾ ಹೋಬಳಿ ಮುಂತಕದಿರೇನಹಳ್ಳಿ ಬಳಿ ಶುಕ್ರವಾರ ಸಂಜೆಮೋಟಾರ್ ಸಮಸ್ಯೆ ಸರಿಪಡಿಸಲು ಒಬ್ಬರ ನಂತರ ಒಬ್ಬರಂತೆ ಕೃಷಿ ಹೊಂಡಕ್ಕೆ ಇಳಿದಿದ್ದ ಮೂವರು ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.

ಗ್ರಾಮದ ಲೋಕೇಶ್ (31), ರಮೇಶ್ (28), ಶ್ರೀಕಾಂತ್ (25) ಮೃತರು.

ಗ್ರಾಮದ ಅಬ್ಬುಗುಂಡು ಪ್ರಸಾದ್ ಅವರ ತೋಟದ ಕೃಷಿ ಹೊಂಡದ ನೀರು ಬಳಸಿಕೊಂಡು ಲೋಕೇಶ್ ವ್ಯವಸಾಯ ಮಾಡುತ್ತಿದ್ದರು. ಕೃಷಿ ಹೊಂಡದ ಮೋಟಾರ್‌ನಲ್ಲಿ ಸಮಸ್ಯೆ ಆಗಿದ್ದರಿಂದ ಮೋಟಾರ್ ಹೊರ ತೆಗೆಯಲು ಲೋಕೇಶ್ ನೀರಿಗೆ ಇಳಿದಿದ್ದರು. ಅವರು ಮೇಲೆ ಬರದಿದ್ದಾಗ, ರಮೇಶ್ ಕೂಡ ಕೃಷಿ ಹೊಂಡಕ್ಕೆ ಇಳಿದಿದ್ದಾರೆ. ಸ್ವಲ್ಪ ಸಮಯದ ನಂತರ ಇಬ್ಬರೂ ಹೊರಬರದಿದ್ದಾಗ ಅಲ್ಲೇ ಇದ್ದ ಶ್ರೀಕಾಂತ್ ಗ್ರಾಮದ ಮುನಿರಾಜು ಎಂಬುವರಿಗೆ ೆನ್ ಮಾಡಿ ಬರಲು ಹೇಳಿ ನಂತರ ಅವರೂ ನೀರಿಗೆ ಇಳಿದು ಮೃತಪಟ್ಟಿದ್ದಾರೆ. ಸಾವಿಗೆ ವಿದ್ಯುತ್ ಪ್ರವಹಿಸುರುವುದೇ ಕಾರಣ ಎಂದು ತಿಳಿದು ಬಂದಿದೆ. ಮುನಿರಾಜು ತೋಟದ ಬಳಿ ಬಂದು ಮೂವರೂ ಇಲ್ಲದನ್ನು ಗಮನಿಸಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಅಗ್ನಿಶಾಮಕ ದಳದ ಅಧಿಕಾರಿ ಲೋಕೇಶ್ ಮತ್ತು ತಂಡ ಮೂವರ ಮೃತದೇಹವನ್ನು ಹೊರತೆಗೆಯಿತು. ಡಿವೈಎಸ್‌ಪಿ ಪಿ. ಮುರಳೀಧರ್, ಇನ್‌ಸ್ಪೆಕ್ಟರ್ ಶಿವರಾಜ್, ಪಿಎಸ್‌ಐ ಮಮತಾ, ಎಎಸ್‌ಐಗಳಾದ ಹರೀಶ್ ನರಸಿಂಹಪ್ಪ ಸ್ಥಳ ಪರಿಶೀಲಿಸಿದರು.

ೆಟೋ ಇದೆ

7 ಸಿಎಂವೈ14 ಶ್ರೀಕಾಂತ್

7 ಸಿಎಂವೈ14 ರಮೇಶ್

7 ಸಿಎಂವೈ14 ಲೋಕೇಶ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net