

ಮಾನ್ವಿ: ವಿಧಾನಸಭಾ ಚುನಾವಣೆ ಪಕ್ರಿಯೆಗೆ ಬಸ್‌ಗಳು ತೆರಳಿದ್ದರಿಂದ ಪಟ್ಟಣದಲ್ಲಿ ಬುಧವಾರ ವಾಹನಗಳಿಲ್ಲದೇ ಪ್ರಯಾಣಿಕರು ಪರದಾಡಿದರು.
ಮಾನ್ವಿ ಘಟಕದಿಂದ 42 ಬಸ್‌ಗಳನ್ನು ಚುನಾವಣೆಗೆ ಬಳಸಿಕೊಳ್ಳಲಾಗಿದೆ. ಸಿಂಧನೂರು ಮತ್ತು ರಾಯಚೂರಿಂದ ಬರುವ ಬಸ್‌ಗಳ ಸಂಖ್ಯೆ ತೀರಾ ಕಡಿಮೆಯಾಗಿದ್ದವು. ತಾಲೂಕಿನ ವಿವಿಧ ಗ್ರಾಮಗಳಿಗೆ ಮತ್ತು ಪಟ್ಟಣಗಳಿಗೆ ತೆರಳು ಪ್ರಯಾಣಿಕರು ಬಸ್‌ಗಳಿಗಾಗಿ ಕಾದು ಕಾದು ಸುಸ್ತಾಗಿ ಹೋದರು.
ಪಾಲಕರಿಗೆ ಮಕ್ಕಳನ್ನು ನೋಡಿಕೊಳ್ಳಲು ಹೈರಾಣಾಗಿ ಹೋದರು. ಬಸ್‌ಗಳು ಬರದಿದ್ದರಿಂದ ಕೆಲ ಪ್ರಮಾಣಿಕರು ಮನೆ ಕಡೆ ಮುಖ ಮಾಡಿದರು. ಮದುವೆ ಸಮಾರಂಭಕ್ಕೆ ತೆರಳು ಪ್ರಯಾಣಿಕರು ಅನಿವಾರ್ಯವಾಗಿ ಖಾಸಗಿ ವಾಹನಗಳಲ್ಲಿ ದುಪ್ಪಟ್ಟ ಹಣ ನೀಡಿ ಪ್ರಯಾಣಿಸಿದರು.