ಜಿಪಂ, ತಾಪಂ ಚುನಾವಣೆಗೆ ಸನ್ನದ್ಧರಾಗಲು ಬಿಜೆಪಿ ಕಾರ್ಯಕರ್ತರಿಗೆ ಕರೆ

Elections, BJP, Activists,
Published on

ಚನ್ನಗಿರಿ: ಬಿಜೆಪಿ ಸಿದ್ಧಾಂತಗಳನ್ನು ಒಪ್ಪುವ ಮುಖಂಡರನ್ನು ಪಕ್ಷಕ್ಕೆ ಕರೆತಂದು ಪಕ್ಷ ಸಂಘಟಿಸುವ ಜತೆಗೆ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸನ್ನದ್ಧರಾಗಬೇಕು ಎಂದು ತಾಲೂಕು ಬಿಜೆಪಿ ಮುಖಂಡ ಎಚ್.ಎಸ್. ಶಿವಕುಮಾರ್ ತಿಳಿಸಿದರು.

ತಾಲೂಕಿನ ಸಂತೇಬೆನ್ನೂರು ವ್ಯಾಪ್ತಿಯ ಕುಳೇನೂರು ಗ್ರಾಮದಲ್ಲಿ ಸಂತೇಬೆನ್ನೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಬುಧವಾರ ಮಾತನಾಡಿದರು.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೊಂದಾಣಿಕೆ ರಾಜಕೀಯ ಮತ್ತು ಅಪಪ್ರಚಾರದಿಂದ ಸೋಲು ಕಾಣುವಂತಾಯಿತು.

ಕ್ಷೇತ್ರದಲ್ಲಿ ಪಕ್ಷದ ಪರ ಸಂಘಟನೆ ಹಾಗೂ ಪ್ರಚಾರ ಕೈಗೊಳ್ಳಲು ಹೆಚ್ಚು ಕಾಲಾವಕಾಶ ಸಿಕ್ಕಿದ್ದರೆ ನನಗೆ ಗೆಲುವು ಆಗುತ್ತಿತ್ತು.

ಕ್ಷೇತ್ರದ ನಿಷ್ಠಾವಂತ ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೇ ನನಗೆ ಮತ ನೀಡಿದ್ದಾರೆ ಎಂದು ಹೇಳಿದರು.

ಬಿಜೆಪಿ ಮುಖಂಡ ದೊಡ್ಡಮಲ್ಲಾಪುರ ವಿಜಯಕುಮಾರ್ ಮಾತನಾಡಿ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.

ಸಭೆಯಲ್ಲಿ ತಾ.ಬಿಜೆಪಿ ಅಧ್ಯಕ್ಷ ಗಿರೀಶ್‌ನಾಯ್ಕ, ತಾ.ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಸಿದ್ದರಾಮಣ್ಣ, ಶಿವಕುಮಾರ್, ಹೊನ್ನೇಬಾಗಿ ಹಾಲಪ್ಪ, ಕಾಗ್ಮ ನಿರ್ದೇಶಕ ಪ್ರಕಾಶ್, ನ್ಯಾಯವಾದಿ ಚಂದ್ರಶೇಖರ್, ನವೀನ್, ಕಾಯಿಸ್ವಾಮಿ, ನಂಜಯ್ಯಕುಮಾರ್, ಸುಧಾಕರ್, ಶಿವುಪಾಟೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net