ತರೀಕಲ್ ಡೇರಿಗೆ ಅಧ್ಯಕ್ಷರಾಗಿ ಸುಗುಣಾ, ಉಪಾಧ್ಯಕ್ಷರಾಗಿ ದೊಡ್ಡರಾಮೇಗೌಡ

09BTP01
Published on

ಬೆಟ್ಟದಪುರ: ಬೆಟ್ಟದಪುರ ಸಮೀಪದ ತರೀಕಲ್ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಸುಗುಣಾ, ಉಪಾಧ್ಯಕ್ಷರಾಗಿ ದೊಡ್ಡರಾಮೇಗೌಡ ಅವಿರೋಧ ಆಯ್ಕೆಯಾದರು.


ಸಂಘದ ಕಚೇರಿಯಲ್ಲಿ ಸೋಮವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಈ ವೇಳೆ ಅಧ್ಯಕ್ಷ ಸ್ಥಾನಕ್ಕೆ ಸುಗುಣಾ, ಉಪಾಧ್ಯಕ್ಷ ಸ್ಥಾನಕ್ಕೆ ದೊಡ್ಡರಾಮೇಗೌಡ ಹೊರತುಪಡಿಸಿ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿ ಶಿವಕುಮಾರ್ ಘೋಷಣೆ ಮಾಡಿದರು.


ಸಂಘದ ನಿರ್ದೇಶಕರಾದ ಚಂದ್ರೇಗೌಡ, ಪುಟ್ಟಲಕ್ಷ್ಮಮ್ಮ, ಜವರಯ್ಯ, ಮಂಜೇಗೌಡ, ಕುಮಾರಿ, ಆಶಾರಾಣಿ, ಪುಟ್ಟಸ್ವಾಮಿ, ರಾಜು, ಸಣ್ಣರಾಮೇಗೌಡ, ಮೈಮುಲ್ ವಿಸ್ತರಣಾಧಿಕಾರಿ ಸತೀಶ್, ಕಾರ್ಯದರ್ಶಿ ಈರೇಗೌಡ, ಗ್ರಾಪಂ ಸದಸ್ಯರಾದ ಕುಬೇರ್, ಅರಬ್ ಜಾನ್, ಗ್ರಾಪಂ ಮಾಜಿ ಅಧ್ಯಕ್ಷ ಲೋಕೇಶ್, ಮುಖಂಡರಾದ ನಾಗಯ್ಯ, ಟಿ.ಸಿ.ರಾಜು, ಕುಮಾರ್, ರಾಮೇಗೌಡ, ಚಂದ್ರಶೇಖರ್, ವಸಂತ್, ಯಶವಂತ್, ಶಿವಕುಮಾತ್, ಬಸವರಾಜು, ಲೋಕೇಶ್, ಪ್ರಜ್ವಲ್, ಪವನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net