ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟ ಪದಾಧಿಕಾರಿಗಳ ಚುನಾವಣೆ

shokamathe
ಉಡುಪಿ ಶೋಕಮಾತೆ ಇಗರ್ಜಿಯ ಆವೆ ಮಾರಿಯಾ
Published on

ಕುಂದಾಪುರ: ಉಡುಪಿ ಜಿಲ್ಲೆ ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದ ಪದಾಧಿಕಾರಿಗಳ ಚುನಾವಣೆ ಉಡುಪಿ ಶೋಕಮಾತೆ ಇಗರ್ಜಿಯ ಆವೆ ಮಾರಿಯಾ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು. ಸಂಪದ ಸಂಸ್ಥೆ ಹಾಗೂ ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದ ಆಧ್ಯಾತ್ಮಿಕ ನಿರ್ದೇಶಕ ಧರ್ಮಗುರು ರೆಜಿನಾಲ್ಡ್ ಪಿಂಟೊ ಅವರು ಚುನಾವಣಾ ಅಧಿಕಾರಿಯಾಗಿ ಚುನಾವಣೆ ನಡೆಸಿಕೊಟ್ಟರು.

2025-2027ರ ವರ್ಷದ ಅವಧಿಗೆ ಭಾವನಾ ಮಹಿಳಾ ಒಕ್ಕೂಟ ನೂತನ ಅಧ್ಯಕ್ಷರಾಗಿ ಶರ್ಮಿಳಾ ಬರೆಟ್ಟೊ ಬಸ್ರೂರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಜೂಲಿಯಟ್ ಪಾಯಸ್ ಕುಂದಾಪುರ, ಕಾರ್ಯದರ್ಶಿಯಾಗಿ ಲವಿನಾ ಡಿಸೋಜ ಪಿಯುಸ್ ನಗರ್, ಖಜಾಂಚಿಯಾಗಿ ಪ್ರೀತಿ ಡಿಸಿಲ್ವ ಕೊಟೇಶ್ವರ, ಜೊತೆ ಕಾರ್ಯದರ್ಶಿ ಸವಿತಾ ಮೆಂಡೋನ್ಸಾ ತಲ್ಲೂರು, ಮೊತಿಯಾಂ ಪತ್ರಿಕೆಯ ಪ್ರತಿನಿಧಿ ಪ್ಲಾವಿಯಾ ರೆಬೆಲ್ಲೊ ಬೈಂದೂರು ಆಯ್ಕೆಯಾದರು. ಸುಗಮ್ಯಾ ಜಿಲ್ಲಾ ಮಹಿಳಾ ಒಕ್ಕೂಟದ ಪ್ರತಿನಿಧಿಯಾಗಿ ಪ್ರೀತಿ ಫರ್ನಾಂಡಿಸ್ ಗಂಗೊಳ್ಳಿ, ಟ್ರೀಜಾ ಸಿಕ್ವೇರಾ ಪಡುಕೋಣೆ ಹಾಗೂ ಪ್ರತಿಮಾ ರೆಬೆಲ್ಲೊ ತ್ರಾಸಿ ಆಯ್ಕೆಯಾದರು.

ಉಡುಪಿ ಜಿಲ್ಲೆ ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದ ಮೊತಿಯಾಂ ಪತ್ರಿಕೆಯ ಪ್ರಧಾನ ಸಂಪಾದಕಿಯಾಗಿ ಪ್ರಮೀಳಾ ಡೇಸಾ, ಸಹ ಸಂಪಾದಕಿಯಾಗಿ ಪ್ರೀತಿ ಫನಾರ್ಂಡಿಸ್ ಗಂಗೊಳ್ಳಿ ಆಯ್ಕೆಯಾಗಿದ್ದಾರೆ. ಭಾವನಾ ಮಹಿಳಾ ಒಕ್ಕೂಟದ ಅಧ್ಯಾತ್ಮಿಕ ನಿರ್ದೇಶಕ ವಿನ್ಸೆಂಟ್ ಕುವೆಲ್ಲೋ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net