ಜೆಡಿಎಸ್ ಬೆಂಬಲಿತ 9 ಸದಸ್ಯರ ಆಯ್ಕೆ

06-02--krs1
Published on

ಕೆ.ಆರ್.ಸಾಗರ: ಹೊಂಗಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ 9 ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದರು.


ಒಟ್ಟು 10 ಸದಸ್ಯರ ಪೈಕಿ ಒಬ್ಬ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 9 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 9 ಸದಸ್ಯರು ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿದರು.


ಜೆಡಿಎಸ್ ಬೆಂಬಲಿತ ಆಶಾ 35, ಕಮಲಾ 37, ಕಾವ್ಯಶ್ರೀ 35, ಪ್ರೇಮಾ 36, ಪಂಕಜಾ 41, ಕೆ.ಎಸ್.ಭಾರತಿ .37, ಮಂಜುಳಾ 41, ರಾಮಮ್ಮ 38 ಹಾಗೂ ಸಾಕಮ್ಮ 36 ಮತಗಳನ್ನು ಪಡೆದು ಆಯ್ಕೆಯಾದರು. ಕಾಂಗ್ರೆಸ್ ಬೆಂಬಲಿತ ಕಾವ್ಯಶ್ರೀ ಎಂ.ಕೆ ಅವಿರೋಧ ಆಯ್ಕೆಯಾಗಿದ್ದರು. ಅನಿತಾ 13, ಗಾಯತ್ರಮ್ಮ 13, ಚೆನ್ನಮ್ಮ 12, ನರಸಮ್ಮ 11, ಪುಷ್ಪಾ 13, ರಾಮಮ್ಮ 13, ವಿನೋದಾ 15 ಹಾಗೂ ಹೇಮಾ 14 ಮತಗಳನ್ನು ಪಡೆದು ಪರಾಭವಗೊಂಡರು.


ಆನಂದ್‌ನಾಯಕ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಗ್ರಾಪಂ ಸದಸ್ಯರಾದ ಬಂಗಾರಪ್ಪ, ಮಂಗಳಮ್ಮ, ಮುಖಂಡ ಲೋಕೇಶ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net