ದ.ಕ. ಮೊಗವೀರ ಮಹಾಜನ ಸಂಘಕ್ಕೆ ಆಯ್ಕೆ

jaya
ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ
Published on

ಪಡುಬಿದ್ರಿ: ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ 2024-2027ರ ಸಾಲಿನ ಅಧ್ಯಕ್ಷರಾಗಿ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಗೌರವ ಸಲಹೆಗಾರ ಜಿ.ಶಂಕರ್ ಉಪಸ್ಥಿತಿಯಲ್ಲಿ, ಗುಂಡು ಬಿ.ಅಮೀನ್ ಹಂಗಾಮಿ ಅಧ್ಯಕ್ಷತೆಯಲ್ಲಿ ಸಂಘದ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷ ಮೋಹನ್ ಬೆಂಗ್ರೆ, ಪ್ರಧಾನ ಕಾರ್ಯದರ್ಶಿ ಶರಣ್‌ಕುಮಾರ್ ಮಟ್ಟು, ಜತೆ ಕಾರ್ಯದರ್ಶಿ ಸುಜಿತ್ ಸಾಲ್ಯಾನ್ ಮೂಲ್ಕಿ, ಕೋಶಾಧಿಕಾರಿ ರತ್ನಾಕರ್ ಸಾಲ್ಯಾನ್ ಮಲ್ಪೆ, ಸಮಿತಿ ಸದಸ್ಯರಾಗಿ ಗುಂಡು ಬಿ.ಅಮೀನ್ ಕಿದಿಯೂರು, ವಾಸುದೇವ ಸಾಲ್ಯಾನ್ ಕಟಪಾಡಿ, ಗಿರಿಧರ್ ಎಸ್.ಸುವರ್ಣ ಮೂಳೂರು, ಕೇಶವ ಎಂ.ಕೋಟ್ಯಾನ್ ಮಲ್ಪೆ, ಸತೀಶ್ ಅಮೀನ್ ಬಾರ್ಕೂರು, ಮಂಜುನಾಥ್ ಸುವರ್ಣ ಬಾರ್ಕೂರು, ರವೀಂದ್ರ ಶ್ರೀಯಾನ್ ಹಿರಿಯಡ್ಕ, ಶಿವರಾಮ ಕೋಟ, ಲೋಕೇಶ್ ಮೆಂಡನ್ ಉಪ್ಪೂರು, ವಿನಯ ಕರ್ಕೇರ ಮಲ್ಪೆ, ಗಿರೀಶ್ ಕುಮಾರ್ ಪಿತ್ರೋಡಿ, ಜಯಂತ್ ಸಾಲ್ಯಾನ್ ಕನಕೋಡ, ಕಿರಣ್ ಕುಮಾರ್ ಪಿತ್ರೋಡಿ, ಸುಧಾಕರ ವಿ.ಸುವರ್ಣ ಉಚ್ಚಿಲ, ನಾರಾಯಣ ಸಿ.ಕರ್ಕೇರ ಪಡುಬಿದ್ರಿ, ಸತೀಶ್ ಆರ್.ಕರ್ಕೇರ ಸುರತ್ಕಲ್, ವಿಜಯ ಸುವರ್ಣ ಕುಳಾಯಿ, ಹೇಮಂತ್ ತಿಂಗಳಾಯ ಹೊಯ್ಗೆ ಬಜಾರ್, ಪುರುಷೋತ್ತಮ ಕೋಟ್ಯಾನ್ ಬೋಳೂರು, ಯಶವಂತ್ ಪಿ.ಮೆಂಡನ್ ಬೋಳೂರು ನೇಮಕಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net