ಬೆಳ್ವೆ: ಗೋಳಿಯಂಗಡಿ ಸಮೀಪ ಕಾರ್ಕಳಕ್ಕೆ ಕುಡಿಯುವ ನೀರಿನ ಯೋಜನೆಗಾಗಿ ಪೈಪ್‌ಲೈನ್ ಸ್ಥಳದಲ್ಲಿ ಹಿಂದೆ ನಿರ್ಮಿಸಿದ ಅಸಮರ್ಪಕ ಚರಂಡಿ ಬದಲಾಯಿಸಿ ಹೊಸ ಚರಂಡಿ ನಿರ್ಮಿಸಲು ಗುತ್ತಿಗೆ ಸಂಸ್ಥೆ ಮುಂದಾಗಿದೆ.
ಬೈಂದೂರು- ವಿರಾಜಪೇಟೆ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ಹಾಲಾಡಿಯಿಂದ ಗೋಳಿಯಂಗಡಿ, ಬೆಳ್ವೆ, ಅಲ್ಬಾಡಿ ಮೂಲಕ ಕಾರ್ಕಳಕ್ಕೆ ಕುಡಿಯುವ ನೀರಿನ ಯೋಜನೆಗಾಗಿ ಖಾಸಗಿ ಗುತ್ತಿಗೆ ಸಂಸ್ಥೆ ರಸ್ತೆಗೆ ಹೊಂದಿಕೊಂಡು ಭಾರಿ ಗಾತ್ರದ ಪೈಪ್ ಹಾಕಿ ಬೇಕಾಬಿಟ್ಟಿ ಕಾಮಗಾರಿಯಿಂದ ಪ್ರತಿ ನಿತ್ಯ ಜನರು ತೊಂದರೆ ಅನುಭವಿಸುತ್ತಿರುವ ಬಗ್ಗೆ ಜುಲೈ 10ರಂದು ವಿಜಯವಾಣಿ ಸುದ್ದಿ ಪ್ರಕಟಿಸಿದ ಬೆನ್ನಲ್ಲೇ ಗುತ್ತಿಗೆದಾರರು ಸಮಸ್ಯೆಗೆ ಸ್ಪಂದಿಸಿದ್ದಾರೆ. ಜಲ್ಲಿ, ವೇಟ್‌ಮೀಕ್ಸ್ ಹಾಕಿ ಬುಧವಾರ ಹಾಗೂ ಗುರುವಾರ ತಾತ್ಕಾಲಿಕ ಕಾಮಗಾರಿ ನಡೆಸಿದ್ದಾರೆ.