

ಕಾರ್ಕಳ: ಬೆಳ್ಳೆ ಕಟ್ಟಿಂಗೇರಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 45ನೇ ವರ್ಷದ ಅಧ್ಯಕ್ಷರಾಗಿ ಸತೀಶ್ ಶೆಟ್ಟಿ ಕಟ್ಟಿಂಗೇರಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಸಮಿತಿ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಗೌರವಾಧ್ಯಕ್ಷ ಮುಕುಂದ ಕಾಮತ್, ಪಿ.ಡಿ.ಕಾಮತ್, ನಾಗರಾಜ್ ಕಾಮತ್, ಪ್ರಧಾನ ಕಾರ್ಯದರ್ಶಿ ಸುಧಾಕರ ಪೂಜಾರಿ, ಕಾರ್ಯದರ್ಶಿ ಕರುಣಾಕರ ಶೆಟ್ಟಿ, ಕೋಶಾಧಿಕಾರಿ ರಾಜೇಂದ್ರ ಶೆಟ್ಟಿ, ಸಹ ಕೋಶಾಧಿಕಾರಿ ಜಯಕರ ಎಸ್., ಸಾಂಸ್ಕೃತಿಕ ಕಾರ್ಯದರ್ಶಿ ಸುಜಾತಾ ಎಸ್.ಸುವರ್ಣ, ಉಪಾಧ್ಯಕ್ಷರಾಗಿ ಕೃಷ್ಣ ಆಚಾರ್ಯ, ದಿವ್ಯಾ ದಿನಕರ್ ಭಂಡಾರಿ, ಪ್ರಮೋದ ಜೋಗಿ, ಅರ್ಚಕರಾಗಿ ವಿಖ್ಯಾತ್ ಭಟ್, ಪ್ರೀತಂ ಕಾಮತ್, ವೇದಮೂರ್ತಿ ಗಣೇಶ್ ಭಟ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.