

ಕೋಟ: ಸಾಹಿತ್ಯ ಎಂದರೆ ಕೇವಲ ಕವನ ಮತ್ತು ಕಥೆಯಲ್ಲ. ಸಾಹಿತ್ಯವು ಮನುಷ್ಯನ ಏಕಾಂತ ದೂರ ಮಾಡುತ್ತದೆ. ಕಥೆ ಕವನಗಳನ್ನು ಓದುವುದರಿಂದ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚುತ್ತದೆ. ಸಾಹಿತ್ಯ ಅಧ್ಯಯನದಿಂದ ನೈತಿಕ ಮೌಲ್ಯ ವರ್ಧಿಸುತ್ತದೆ ಎಂದು ಉಪನ್ಯಾಸಕ ಎಚ್.ಸುಜಯೀಂದ್ರ ಹಂದೆ ಹೇಳಿದರು.
ಕೋಟದ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಾಹಿತ್ಯ ಸಂಘದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಉಪನ್ಯಾಸಕ ಪ್ರೇಮಾನಂದ ಮತ್ತು ಶಂಭು ಭಟ್ಟರು ಸುಜಯೀಂದ್ರ ಹಂದೆ ಅವರನ್ನು ಸನ್ಮಾನಿಸಿದರು. ಹಿರಿಯ ಶಿಕ್ಷಕ ವೆಂಕಟೇಶ ಉಡುಪ ಉಪಸ್ಥಿತರಿದ್ದರು. ನಿಧೀಶ ಭಟ್ಟ ಪ್ರಾರ್ಥಿಸಿದರು. ಪ್ರಾಂಶುಪಾಲ ಜಗದೀಶ ನಾವಡ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಸಂಘದ ಸಂಚಾಲಕಿ ನಳಿನಾಕ್ಷಿ ವಂದಿಸಿದರು. ಅಮಿತ್ ಕಾರ್ಯಕ್ರಮ ನಿರೂಪಿಸಿದರು.