ಮನೆ ಕುಸಿದ ವೃದ್ಧೆ ಸಾವು

Padmavva Shivanagouda
Published on

ಬ್ಯಾಡಗಿ: ತಾಲೂಕು ತಡಸ ಗ್ರಾಮದಲ್ಲಿ ಶುಕ್ರವಾರ ಮನೆ ಕುಸಿದು ವೃದ್ಧೆಯೊಬ್ಬಳು ಮೃತಪಟ್ಟ ದಾರುಣ ಘಟನೆ ನಡೆದಿದೆ.

ಪದ್ಮವ್ವ ಶಿವನಗೌಡ ಪಾಟೀಲ (65) ಮೃತ ವೃದ್ಧೆ.

ಶುಕ್ರವಾರ ಮನೆಯಲ್ಲಿ ಶ್ರಾವಣ ಮಾಸದ ಪೂಜೆಗೆ ತಯಾರಿ ನಡೆಸಿದ್ದರು. ನಂತರ ಸ್ನಾನದ ಮನೆಗೆ ತೆರಳಿದಾಗ ಏಕಾಏಕಿ ಮನೆ ಕುಸಿದಿದೆ. ಮನೆಯಲ್ಲಿ ಮಕ್ಕಳು, ಸೊಸೆಯಂದಿರು ಹೊಲಕ್ಕೆ ತೆರಳಿದ್ದರು. ಮೊಮ್ಮಕ್ಕಳು ಶಾಲೆಗೆ ತೆರಳಿದ್ದರು. ಕೆಲಹೊತ್ತಿನ ಬಳಿಕ ಮನೆಗೆ ಬಂದಾಗ ಘಟನೆ ತಿಳಿದಿದೆ. ಬಳಿಕ ವೃದ್ಧೆಯ ದೇಹದಲ್ಲಿ ಮನೆಗೆ ಬಳಸಿದ ಮೊಳೆಯ ತುಂಡುಗಳ ಸಿಕ್ಕಿಕೊಂಡಿತ್ತು. ಕೂಡಲೆ ಬ್ಯಾಡಗಿ ಸ್ಥಳೀಯ ಸರ್ಕಾರಿ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ರಾತ್ರಿ ಸುರಿದ ಮಳೆಗೆ ಮನೆ ಸಂಪೂರ್ಣವಾಗಿ ನೆನೆದು ಹೋಗಿತ್ತು. ಮನೆಯ ಉಳಿದ ಸದಸ್ಯರೆಲ್ಲ ಹೊರ ಹೋಗಿದ್ದರಿಂದ ಹೆಚ್ಚಿನ ಪ್ರಾಣ ಹಾನಿ ತಪ್ಪಿದೆ. ಇಲ್ಲದಿದ್ದರೆ ದೊಡ್ಡ ದುರಂತವೊಂದು ನಡೆಯುತ್ತಿತ್ತು.

ಸ್ಥಳಕ್ಕೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಪೋಲಿಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net