ವಿಷ ಕುಡಿದು ವೃದ್ಧೆ ಆತ್ಮಹತ್ಯೆ

Published on

ಹಲಗೂರು: ಜೀವನದಲ್ಲಿ ಜಿಗುಪ್ಸೆಗೊಂಡು ಸಮೀಪದ ಮಡಹಳ್ಳಿ ದೊಡ್ಡಿ ಗ್ರಾಮದ ವೃದ್ಧೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಡಹಳ್ಳಿ ದೊಡ್ಡಿ ಗ್ರಾಮದ ಸಿದ್ದಮ್ಮ(75) ಸಹಜವಾಗಿ ಕುಡಿತ ಚಟದ ವ್ಯಸನಿಯಾಗಿದ್ದು, ಜೀವನದ ಬಗ್ಗೆ ಜಿಗುಪ್ಸೆಯಿಂದ ಶುಕ್ರವಾರ ಮದ್ಯದ ಬಾಟಲಿಗೆ ವಿಷ ಬೇರೆಸಿ ಕುಡಿದಿದ್ದಾರೆ. ಕೂಡಲೇ ಸಿದ್ದಮ್ಮ ಅವರನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ. ಹಲಗೂರು ಠಾಣೆ ಸಬ್ ಇನ್ಸ್‌ಪೆಕ್ಟರ್ ಬಿ.ಮಹೇಂದ್ರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net