ಬೀದಿ ನಾಯಿಗಳ ದಾಳಿಗೆ ವೃದ್ಧ ಬಲಿ

31M.D.R.1
Published on

ಮದ್ದೂರು: ತಾಲೂಕಿನ ಬೆಸಗರಹಳ್ಳಿ ಗ್ರಾಮದ ಮದ್ಯದಂಗಡಿ ಪಕ್ಕದಲ್ಲಿ ಸೋಮವಾರ ರಾತ್ರಿ ಮಲಗಿದ್ದ ಅಪರಿಚಿತ ವೃದ್ಧನ ಮೇಲೆ ಬೀದಿ ನಾಯಿಗಳ ಗುಂಪು ದಾಳಿ ಮಾಡಿ ಕೊಂದು ಹಾಕಿವೆ.

ನಾಯಿಗಳ ಕಡಿತದಿಂದ ತೀವ್ರ ರಕ್ತಸ್ರಾವಗೊಂಡು ವೃದ್ಧ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಪಿಎಸ್‌ಐ ಮಲ್ಲಪ್ಪ ಕಂಬಾರ್ ನೇತೃತ್ವದ ತಂಡ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.

ವ್ಯಕ್ತಿ ಯಾರೆಂದು ತಿಳಿದು ಬಾರದ ಕಾರಣ ಅವರ ಮೃತದೇಹವನ್ನು ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಶವಾಗಾರದಲ್ಲಿ ಇರಿಸಿದ್ದು, ವಾರಸುದಾರರು ಇದ್ದರೆ ಬೆಸಗರಹಳ್ಳಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಪಿಎಸ್‌ಐ ಮಲ್ಲಪ್ಪ ಕಂಬಾರ್ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net