ರೈಲಿನಡಿಗೆ ಬಿದ್ದು ವೃದ್ಧ ಸಾವು

New Project
Published on

ಮೂಲ್ಕಿ: ಪಡುಪಣಂಬೂರು ಸಮೀಪದ ಕಲ್ಲಾಪು ರೈಲ್ವೆ ಗೇಟ್ ಬಳಿ ಹಳೆಯಂಗಡಿ ಕೊಪ್ಪಳ ನಿವಾಸಿ ರಾಮ ಗುರಿಕಾರ(85) ಎಂಬುವರು ರೈಲಿನಡಿಗೆ ಬಿದ್ದು ಮೃತಪಟ್ಟಿದ್ದಾರೆ.

ರಾಮ ಗುರಿಕಾರ ಮನೆಯಿಂದ ಕಲ್ಲಾಪುವಿನಲ್ಲಿರುವ ಮಗನ ಮನೆಗೆ ರೈಲು ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಗುರುವಾರ ಸಂಜೆ 5.30 ಸುಮಾರಿಗೆ ರೈಲು ಡಿಕ್ಕಿ ಹೊಡೆದಿದೆ. ರೈಲಿನ ಚಾಲಕ ಕಲ್ಲಾಪು ರೈಲ್ವೆ ಗೇಟ್ ಕೀಪರ್‌ಗೆ ಮಾಹಿತಿ ನೀಡಿದ್ದು, ಬಳಿಕ ಮೂಲ್ಕಿ ಪೊಲೀಸರಿಗೆ ದೂರು ನೀಡಲಾಗಿದೆ. ರಾಮ ಗುರಿಕಾರ ಅವರು ಪಡುಪಣಂಬೂರು ಕಲ್ಲಾಪು ಶ್ರೀ ವೀರಭದ್ರ ದೇವಸ್ಥಾನದಲ್ಲಿ ಗುರಿಕಾರರಾಗಿ ಸೇವೆ ಸಲ್ಲಿಸುತ್ತಿದ್ದು, ಈ ಹಿಂದೆ ಹಳೆಯಂಗಡಿಯಲ್ಲಿ ನೇಕಾರ ವೃತ್ತಿ ನಡೆಸುತ್ತಿದ್ದರು. ನಾಲ್ವರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net