ತಾಯಿಯ ಕೊಲೆ ಆರೋಪಿಯಿಂದ ಮಾಹಿತಿ ಸಂಗ್ರಹ

New Project (56)
Published on

ಕಾಸರಗೋಡು: ಮಂಜೇಶ್ವರ ವರ್ಕಾಡಿಯ ನಲ್ಲೆಂಗಿ ನಿವಾಸಿ ಲೂಯಿಸ್ ಮೊಂತೇರೊ ಅವರ ಪತ್ನಿ ಹಿಲ್ಡಾ ಮೊಂತೆರೋ(65) ಅವರನ್ನು ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಕೊಲೆಗೈದ ಆರೋಪಿ ಪುತ್ರನನ್ನು ಪೊಲೀಸರು ಮನೆ ವಠಾರಕ್ಕೆ ಕರೆತಂದು ಮಾಹಿತಿ ಸಂಗ್ರಹಿಸಿದರು.

ಮಂಜೇಶ್ವರ ಠಾಣೆ ಇನ್‌ಸ್ಪೆಕ್ಟರ್ ಅನೂಪ್‌ಕುಮಾರ್ ನೇತೃತ್ವದ ಪೊಲೀಸರ ತಂಡ ಈತನನ್ನು ಕರೆತಂದಿದ್ದು, ತಾಯಿಯ ತಲೆಗೆ ಬಡಿದು ಕೊಲೆಗೆ ಯತ್ನಿಸಿದ ಮರದ ಸಲಾಕೆಯನ್ನು ಮನೆ ವಠಾರದಿಂದ ಪತ್ತೆಹಚ್ಚಿದ್ದಾರೆ. ಸುಟ್ಟ ಮೃತದೇಹವನ್ನು ಬಿಸಾಡಿದ್ದ ಸ್ಥಳಕ್ಕೂ ಕರೆದೊಯ್ದು ಮಾಹಿತಿ ಸಂಗ್ರಹಿಸಿದರು. ಜೂನ್ 27ರಂದು ಹಿಲ್ಡಾ ಮೊಂತೆರೋ ಅವರನ್ನು ಪುತ್ರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ನಡೆಸಿರುವುದಲ್ಲದೆ, ನೆರೆಮನೆ ನಿವಾಸಿ ಹಾಗೂ ಸಂಬಂಧಿ ವಿಕ್ಟರ್ ಅವರ ಪತ್ನಿ ಲೊಲಿಟ ಅವರ ಮೇಲೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಇದರಿಂದ ಲೊಲಿಟಾ ಅವರಿಗೆ ಗಂಭೀರ ಸುಟ್ಟ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚೇತರಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net