

ತುಮಕೂರು: ಇತ್ತೀಚೆಗೆ ರಾಜ್ಯ ಸರ್ಕಾರ ಆಸ್ತಿ ನೋಂದಣಿ ಮಾಡಲು ಇ -ಖಾತೆ ಕಡ್ಡಾಯಗೊಳಿಸಿದ್ದು ಬಿಬಿಎಂಪಿ ವ್ಯಾಪ್ತಿಯಲ್ಲಿ ಆನ್ ಲೈನ್ ರಿಜಿಸ್ಟ್ರೇಷನ್ ವ್ಯವಸ್ಥೆಯನ್ನು ಜಾರಿಮಾಡಿರುವಂತೆ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಲ್ಪಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಗ್ರಹಿಸಿದರು.
ಜಿಲ್ಲೆಯ ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು ಹಾಗೂ ಜನಸಾಮಾನ್ಯರಿಗೆ ಆಸ್ತಿ ಖರೀದಿ ಮಾಡಲು , ಮಾರಾಟ ಮಾಡಲು , ಬ್ಯಾಂಕ್ ಸಾಲ ಪಡೆಯಲು, ಬ್ಯಾಂಕ್ ಸಾಲ ತೀರಿಸಿ ಖುಲಾಸೆ ಮಾಡಲು ಹಾಗೂ ಇನ್ನಿತರ ವ್ಯವಹಾರಗಳಿಗೆ ಇ -ಖಾತೆ ಕಡ್ಡಾಯವಾಗಿರುವುದರಿಂದ ಆನ್ ಲೈನ್ ನಲ್ಲಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ಅಲ್ಲದೆ, ನಗರ ಪಾಲಿಕೆ ಕಚೇರಿಯಲ್ಲು ಹೆಚ್ಚಿನ ನೋಂದಣಿ ಕೌಂಟರ್ ಗಳನ್ನು ಸ್ಥಾಪಸಿ, ಪ್ರತಿ ವಾರ್ಡ್ನಲ್ಲಿ ಹೆಲ್ಪ್ ಲೈನ್ ತೆರೆದು ಸರಳ ರೀತಿಯಲ್ಲಿ ಇ &-ಖಾತೆ ಮಾಡಲು ಅನುಕೂಲತೆ ಮಾಡುವಂತೆ ಸಂಸ್ಥೆಯ ಅಧ್ಯಕ್ಷ ಟಿ.ಜೆ.ಗಿರೀಶ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.