ಏಕಲವ್ಯ ಮಾದರಿ ವಸತಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಶಸ್ತಿ

10 HANUR 2
Published on

ಹನೂರು: ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ನಡೆದ 2024-25ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಮಂಗಲ ಏಕಲವ್ಯ ಮಾದರಿ ವಸತಿ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಜಯ ಗಳಿಸಿದ್ದಾರೆ.


ಕಬಡ್ಡಿ ಪಂದ್ಯಾವಳಿಯಲ್ಲಿ ಕಾಲೇಜಿನ ಮುತ್ತು ತಂಡ ಚಾಂಪಿಯನ್‌ಶಿಪ್ ಪಡೆದಿದೆ. ಉದ್ದ ಜಿಗತದಲ್ಲಿ ಪ್ರೀತಮ್, ಜಾವಲಿನ್ ಥ್ರೋನಲ್ಲಿ ನಿತಿನ್‌ಕುಮಾರ್ ಪ್ರಥಮ, ಎತ್ತರ ಜಿಗಿತದಲ್ಲಿ ಸೌಮ್ಯಾ ದ್ವಿತೀಯ, 3 ಸಾವಿರ ಓಟದಲ್ಲಿ ಜಯಸೂರ್ಯ ಹಾಗೂ 100 ಮೀನಲ್ಲಿ ಮಹೇಶ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.


ಸಾಧಕ ವಿದ್ಯಾರ್ಥಿಗಳನ್ನು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ಪ್ರಾಂಶುಪಾಲೆ ರೇಖಾರಾಣಿ, ಹಿರಿಯ ಉಪನ್ಯಾಸಕ ಡಾ.ಮಂಜು, ನಿಲಯಪಾಲಕ ಸೂರಜ್‌ಕುಮಾರ್, ಉಪನ್ಯಾಸಕರು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net