

ಬೆಂಗಳೂರು: ಇಂಡಿಯಾ ಗ್ಲೋಬಲ್ ಇನ್ನೋವೇಶನ್ ಕನೆಕ್ಟ್ (ಇಜಿಐಸಿ) ಮೂರನೇ ಆವೃತ್ತಿಯ ಜಾಗತಿಕ ಸಮ್ಮೇಳನಕ್ಕೆ ಬೆಂಗಳೂರಿನಲ್ಲಿ ಶುಕ್ರವಾರ ಚಾಲನೆ ದೊರೆತಿದೆ. ಈ ಕಾರ್ಯಕ್ರಮದಲ್ಲಿ 17 ರಾಷ್ಟ್ರಗಳ ಜಾಗತಿಕ ಉದ್ಯಮ ಪ್ರಮುಖರು, ಯುಎಸ್, ಜಪಾನ್, ಕೊರಿಯಾ, ಜರ್ಮನಿ, ಸಿಂಗಾಪುರ, ಇಸ್ರೇಲ್, ಫ್ರಾನ್ಸ್, ಯುಎಇ ಮುಂತಾದ ದೇಶಗಳ ಹೂಡಿಕೆದಾರರು, ವೆಂಚರ ಕ್ಯಾಪಿಟಲಿಸ್ಟ್ಗಳು, ಉದ್ಯಮಿಗಳು ತಂತ್ರಾನ ಹಾಗೂ ವ್ಯವಹಾರದ ಕುರಿತು ಸಂವಾದ ನಡೆಸಿದರು.
ಸ್ಟಾರ್ಟ್ಅಪ್ಗಳಲ್ಲಿ ಹೂಡಿಕೆ ತಾಣವಾಗಿ ಭಾರತ, ಡಿಜಿಟಲ್ ಗ್ರಾಹಕ ಕ್ರಾಂತಿ, ಕಾರ್ಪೊರೇಟ್ ಆವಿಷ್ಕಾರಗಳಿಗೆ ಉತ್ತೇಜನೆ, ಭಾರತದ ವಿಶಿಷ್ಟ ಆವಿಷ್ಕಾರ ಮಾದರಿ, ಮುಂದಿನ ಐದು ವರ್ಷಗಳಲ್ಲಿ ಭಾರತದ ತಂತ್ರಾನ ಭವಿಷ್ಯದ ದೃಷ್ಟಿಕೋನ ಸೇರಿದಂತೆ ಹಲವಾರು ವಿಚಾರಗಳ ಕುರಿತು ಉದ್ಯಮ ಪರಿಣಿತರು ಗೋಷ್ಠಿ ನಡೆಸಿದರು.
ಕಾರ್ಯಕ್ರಮದಲ್ಲಿ ಸ್ಮಾಡ್ಜಾ ಆ್ಯಂಡ್ ಸ್ಮಾಡ್ಜಾ ಸ್ಟ್ರಾಟೆಜಿಕ್ ಅಡ್ವೆೃಸರಿಯ ಅಧ್ಯ ಕ್ಲೌಡ್ ಸ್ಮಾಡ್ಜಾ ಮಾತನಾಡಿ, ಭಾರತ ಡೀಪ್ ಟೆಕ್ನಾಲಜಿ, ಆರೋಗ್ಯ ತಂತ್ರಾನ, ಸೆಮಿಕಂಡಕ್ಟರ್ಗಳು ಮತ್ತು ಏರೋಸ್ಪೇಸ್ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಗಮನಾರ್ಹವಾಗಿ ಮುಂದುವರಿಯುತ್ತಿದೆ ಎಂದು ಹೇಳಿದರು.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ)ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ್ ಗುಪ್ತಾ ಮಾತನಾಡಿ, ಬೆಂಗಳೂರು ಜಾಗತಿಕ ತಂತ್ರಾನ ಕೇಂದ್ರವಾಗಿ ಗುರುತಿಸಿಕೊಂಡಿದೆ. ಇಂದು ಭಾರತದಲ್ಲಿ ನೋಂದಾಯಿತಗೊಂಡಿರುವ ಸ್ಟಾರ್ಟ್ಅಪ್ಗಳಲ್ಲಿ ಶೇ.25 ರಷ್ಟು ಬೆಂಗಳೂರಿನಲ್ಲಿದೆ. ಜಾಗತಿಕ ಐಜಿಐಸಿ ವೇದಿಕೆ ಮೂಲಕ ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಇತ್ಯಾದಿ ನಗರಗಳಲ್ಲಿ ಸ್ಟಾರ್ಟ್ಅಪ್ಗಳನ್ನು ಮುಖ್ಯವಾಹಿನಿಗೆ ತರಲಿದ್ದೇವೆ ಎಂದರು.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಅಧ್ಯ ಬಿ.ವಿ. ನಾಯ್ಡು ಮಾತನಾಡಿ, ಬೆಂಗಳೂರು ಸ್ಟಾರ್ಟಪ್ ಪರಿಸರ ವ್ಯವಸ್ಥೆಯು ಅಭಿವೃದ್ಧಿ ಹೊಂದುತ್ತಿದೆ. ಹೂಡಿಕೆದಾರರು ಭಾರತದಲ್ಲಿ ಇನ್ನೂ ಬಂಡವಾಳ ಹೂಡದಿದ್ದರೆ, ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯನ್ನು ಕಳೆದುಕೊಳ್ಳಲಿದ್ದಾರೆ. 1.3 ಬಿಲಿಯನ್ ಜನರಲ್ಲಿ 1.1 ಬಿಲಿಯನ್ ಜನರು ಸಂಪರ್ಕ ವ್ಯವಸ್ಥೆ ಹೊಂದಿದ್ದು, ಭಾರತವು ವಿಶ್ವದ ಅತ್ಯುತ್ತಮ ಡಿಜಿಟಲೈಸೇಶನ್ ಪ್ರಕ್ರಿಯೆ ಸಾಧ್ಯವಾಗಿದೆ. ಭಾರತ ಅತಿ ಹೆಚ್ಚು ಸ್ಮಾರ್ಟ್ೋನ್ ಬಳಕೆದಾರರನ್ನು ಹೊಂದಿದೆ. ಕಳೆದ ತಿಂಗಳು 250 ಶತಕೋಟಿ ಯುಎಸ್ ಡಾರ್ ಮೌಲ್ಯದ ಯುಪಿಐ ವಹಿವಾಟು ಆಗಿದೆ. ಇದು ಸರ್ಕಾರ ಡಿಜಿಟಲ್ ರೂಪಾಂತರಕ್ಕಾಗಿ ಪಟ್ಟ ಪ್ರಯತ್ನಕ್ಕೆ ಸಾಯಾಗಿದೆ ಎಂದರು.