ಬಡತನ ಜಯಿಸಿ ಗುರಿಯೆಡೆಗೆ ಪ್ರಯತ್ನ

karyakrama
ಪಿ.ಆರ್.ಎನ್. ಪಾಂಡುರಂಗ ರಮಣ ನಾಯಕ ಅಮೃತ ಭಾರತಿ ವಿದ್ಯಾಲಯದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಸಂಕಲ್ಪ ದಿವಸ ಕಾರ್ಯಕ್ರಮ ನಡೆಯಿತು.
Published on

ಹೆಬ್ರಿ: ಬಡತನ ಶಾಪವಲ್ಲ. ಬಡತನ ಜಯಿಸಿ ಗುರಿ ಕಡೆಗೆ ಸಾಗಬೇಕು. ಬಡತನವನ್ನೇ ನಮ್ಮ ಅಸ್ತ್ರವನ್ನಾಗಿಸಿಕೊಳ್ಳಬೇಕು. ಸಮಾಜದಲ್ಲಿ ಹಲವಾರು ಅನಿಷ್ಟಗಳಿಂದ ದೂರವಿದ್ದು, ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯಮಟ್ಟದಲ್ಲಿ ನಿಮ್ಮ ಶಾಲೆ ಗುರುತಿಸುವಂತಾಗಲಿ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಉಪ ಪ್ರಾಂಶುಪಾಲ ದಿವಾಕರ ಮರಕಾಲ ಹೇಳಿದರು.

ಪಿ.ಆರ್.ಎನ್. ಪಾಂಡುರಂಗ ರಮಣ ನಾಯಕ ಅಮೃತ ಭಾರತಿ ವಿದ್ಯಾಲಯದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಸಂಕಲ್ಪ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಮೃತ ಭಾರತಿ ವಿದ್ಯಾಲಯ ಆಡಳಿತ ಮಂಡಳಿ ಅಧ್ಯಕ್ಷ ಶೈಲೇಶ್ ಕಿಣಿ, ಮುಖ್ಯ ಶಿಕ್ಷಕಿ ಅಪರ್ಣಾ ಆಚಾರ್, ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ ಕುಮಾರ ಶೆಟ್ಟಿ, ಕಾಲೇಜು ವಿಭಾಗ ಪ್ರಾಂಶುಪಾಲ ಅಮರೇಶ ಹೆಗ್ಡೆ ಉಪಸ್ಥಿತರಿದ್ದರು. ಪಂಚಮಿ ಕಾರ್ಯಕ್ರಮ ನಿರೂಪಿಸಿದರು. ಸುಮನ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net