

ಬ್ಯಾಡಗಿ: ಸಮಾಜದ ಅಂಕು- ಡೊಂಕುಗಳನ್ನು ಬರವಣಿಗೆ ಮೂಲಕ ಜನಸಾಮಾನ್ಯರಿಗೆ ನ್ಯಾಯ ಕೊಡಿಸುವ ಪತ್ರಕರ್ತರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ತಾಲೂಕಿನ ಹಲವಾರು ಪತ್ರಕರ್ತರು ಇಂದಿಗೂ ನಿವೇಶನಕ್ಕಾಗಿ ಪರದಾಡುವಂತಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಚಾವಡಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ರಾಜ್ಯ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಬ್ಯಾಡಗಿ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾಜಿ ಶಾಸಕರಾದ ಸುರೇಶಗೌಡ್ರ ಪಾಟೀಲ, ವಿರೂಪಾಕ್ಷಪ್ಪ ಬಳ್ಳಾರಿ, ನೆಹರು ಓಲೇಕಾರ ಮಾತನಾಡಿ, ಪತ್ರಕರ್ತರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯ ಕಲ್ಪಿಸಲು ನಾವು ಈ ಹಿಂದೆ ಶ್ರಮಿಸಿದ್ದೇವೆ. ಆದರೆ, ಬ್ಯಾಡಗಿಯ ಪರ್ತಕರ್ತರು ನಿವೇಶನಕ್ಕೆ ಅರ್ಜಿ ಸಲ್ಲಿಸಿ, ಹತ್ತಾರು ವರ್ಷ ಕಳೆದರೂ ಇಂದಿಗೂ ಸಮಸ್ಯೆಗೆ ಪರಿಹಾರ ಸಿಗದಿರುವುದು ಬೇಸರವಾಗಿದೆ. ನಿಮ್ಮ ಸಮಸ್ಯೆಯನ್ನು ಲಿಖಿತವಾಗಿ ಕೊಡಿ, ಸ್ಥಳೀಯ ಶಾಸಕರು ಸೇರಿ ಎಲ್ಲರೂ ನಿಗಾವಹಿಸಿ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಬಸವಂತಪ್ಪ ಹುಲ್ಲತ್ತಿ ವಹಿಸಿದ್ದರು.
ಹಿರಿಯ ಪತ್ರಿಕಾ ವಿತರಕರಾದ ಮುತ್ತಪ್ಪ ರಾಮಗೊಂಡನಹಳ್ಳಿ, ಮಂಜುನಾಥ ವಾಲಿಶೆಟ್ಟರ ಹಾಗೂ ಗೋಣೆಪ್ಪ ಚಿಕ್ಕಣ್ಣನವರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಸ್.ಎ. ಪ್ರಸಾದ್, ತಾಪಂ ಇಒ ಕೆ.ಎಂ. ಮಲ್ಲಿಕಾರ್ಜುನ, ಡಾ. ಪುಟ್ಟರಾಜ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳಿಯಪ್ಪಗೋಳ, ರೋಟರಿ ಅಧ್ಯಕ್ಷ ಮಾಲತೇಶ ಉಪ್ಪಾರ, ವಕೀಲರ ಸಂಘದ ಅಧ್ಯಕ್ಷ ಶಂಕರ ರ್ಬಾ, ಪುರಸಭೆ ಸದಸ್ಯರಾದ ಮಂಜಪ್ಪ ರ್ಬಾ, ಶಂಕರ ಕುಸಗೂರು, ಫಕೀರಮ್ಮ ಚಲವಾದಿ, ಸರೋಜಾ ಉಳ್ಳಾಗಡ್ಡಿ, ಕಲಾವತಿ ಬಡಿಗೇರ, ರೇಷ್ಮಾ ಭಾನು ನಜೀರಅಹ್ಮದ್, ಮಹ್ಮದರಫೀ ಮುದಗಲ್ಲ, ಪತ್ರಕರ್ತರಾದ ನಾಗರಾಜ ಗುತ್ತಲ, ಟಿಪ್ಪುಸುಲ್ತಾನ ಹುಲ್ಮನಿ, ಕರಿಬಸಯ್ಯ ಹಿರೇಮಠ, ಚಂದ್ರು ಮುಳಗುಂದ, ರಾಜು ಗುತ್ತಲ, ಕುಮಾರ ಕರ್ಚಡ ಇತರರಿದ್ದರು. ಶಿವಾನಂದ ಮಲ್ಲನಗೌಡ್ರ ಹಾಗೂ ವೀರಯ್ಯಸ್ವಾಮಿ ಚೌಕೀಮಠ ನಿರ್ವಹಿಸಿದರು.