ಮಾನವ-ವನ್ಯಜೀವಿ ಸಂಘಷ ತಗ್ಗಿಸಲು ಪ್ರಯತ್ನ

Bdk_Wildlife
Published on

ಕಾಸರಗೋಡು: ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ತಪ್ಪಿಸಲು ವಿಶೇಷ ಗಮನ ನೀಡಲಾಗುತ್ತಿದೆ. ಗುಡ್ಡಗಾಡು ಪ್ರದೇಶದ ರೈತರೊಂದಿಗೆ ಅರಣ್ಯ ಇಲಾಖೆ ಮತ್ತು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಅರಣ್ಯ ಮತ್ತು ವನ್ಯಜೀವಿ ಇಲಾಖೆ ಸಚಿವ ಎ.ಕೆ.ಶಶೀಂದ್ರನ್ ತಿಳಿಸಿದರು.

ಅರಣ್ಯ ವನಶ್ರೀ ಕಾಂಪ್ಲೆಕ್ಸ್‌ನಲ್ಲಿ, ನಬಾರ್ಡ್ ಯೋಜನೆಯಡಿ ನಿರ್ಮಿಸಲಾದ ಕಾಸರಗೋಡು ಫ್ಲೈಯಿಂಗ್ ಸ್ಕ್ವಾಡ್ ರೇಂಜ್ ಫಾರೆಸ್ಟ್ ಆಫೀಸ್ ಅನ್ನು ಆನ್‌ಲೈನ್‌ನಲ್ಲಿ ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಕೆ.ಇ.ಎಲ್. ಕೊಚ್ಚಿ ವ್ಯವಸ್ಥಾಪಕ ನಿರ್ದೇಶಕ ಕರ್ನಲ್ ಶಾಜಿ ಎಂ.ವರ್ಗೀಸ್ ವರದಿ ಮಂಡಿಸಿದರು.

ಕಾಸರಗೋಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಸಿ.ಎ.ಸೈಮಾ, ನಬಾರ್ಡ್ ಡಿ.ಡಿ.ಎಂ. ಕೆ.ಎಸ್.ಶಾನವಾಸ್, ಪಿ.ವಿ.ಕುಂಞಂಬು, ಬಿಜು ಉಣ್ಣಿತ್ತಾನ್, ಕರೀಂ ಚಂದೇರಾ, ಕೆದಪ್ರಂ ಕೃಷ್ಣನ್ ನಂಬಿಯಾರ್, ಸಿ.ಎಂ.ಎ.ಜಲೀಲ್, ಅಹ್ಮದಲಿ ಕುಂಬಳೆ, ಸಿದ್ದಿಕ್ ಕೊಡ್ಯಮೆ, ವಿ.ಕೆ.ರಮೇಶ, ಹೊಸದುರ್ಗ ವಲಯ ಅರಣ್ಯಾಧಿಕಾರಿ ಟಿ.ಸೊಲೊಮನ್ ಥಾಮಸ್ ಜಾರ್ಜ್, ಅರಣ್ಯಾಧಿಕಾರಿಕಾರಿಗಳಾದ ಸಿ.ವಿ.ವಿನೋದ್ ಕುಮಾರ್, ಕೆ.ಗಿರೀಶ್, ಪರಪ್ಪ ಸರ್ಕಾರಿ ಮರದ ಡಿಪೋ ಅಧಿಕಾರಿ ಕೆ.ಇ.ಬಿಜುಮೋನ್, ಕೆ.ಎಫ್.ವಿ.ಎಸ್.ಎ. ಜಿಲ್ಲಾಧ್ಯಕ್ಷ ಕೆ.ಎನ್.ರಮೇಶನ್ ಮಾತನಾಡಿದರು. ಕಾಸರಗೋಡು ವಿಭಾಗೀಯ ಅರಣ್ಯಾಧಿಕಾರಿ ಕೆ.ಅಶ್ರಫ್ ಸ್ವಾಗತಿಸಿದರು. ಕಾಸರಗೋಡು ಪ್ಲೈಯಿಂಗ್ ಸ್ಕ್ಯಾಡ್ ರೇಂಜ್ ಫಾರೆಸ್ಟ್ ಆಫೀಸರ್ ವಿ.ರತೀಶನ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net