ರೋಟರಿ ಕಂಬಳ ಕೂಟದ ಫಲಿತಾಂಶ

Btw_Kambala
Published on

ಬಂಟ್ವಾಳ: ಇಲ್ಲಿನ ಸಿದ್ದಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆಯಲ್ಲಿ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಶನಿವಾರ ನಡೆದ ಸಬ್‌ಜೂನಿಯರ್ ನೇಗಿಲು ಮತ್ತು ಹಗ್ಗ ವಿಭಾಗದ ರೋಟರಿ ಕಂಬಳ ಕೂಟದ ಫಲಿತಾಂಶ ಪ್ರಕಟಗೊಂಡಿದೆ.

ವಿಜೇತರಿಗೆ ಪ್ರಥಮ ಅರ್ಧ ಪವನ್ ಮತ್ತು ದ್ವಿತೀಯ ಕಾಲು ಪವನ್ ಚಿನ್ನದ ಪದಕ ಹಾಗೂ ತೃತೀಯ ಮತ್ತು ಚತುರ್ಥ ಬಹುಮಾನವಾಗಿ ತಲಾ 5 ಸಾವಿರ ರೂ. ಮೊತ್ತದ ನಗದು ನೀಡಿ ಗೌರವಿಸಲಾಯಿತು.

ಸಬ್‌ಜೂನಿಯರ್ ಹಗ್ಗ ವಿಭಾಗ: ಪ್ರಥಮ-ಎಂಬತ್ತು ಬಡಗುಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ(ಬಿ.) ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ. ದ್ವಿತೀಯ-ಬಳ್ಕುಂಜೆಗುತ್ತು ಮಲ್ಲಿಕಾ ಯಶವಂತ ಶೆಟ್ಟಿ. ಓಡಿಸಿದವರು: ಬೈಂದೂರು ಕೆರ್ಗಲ್ ಗರಡಿಮನೆ ಹರೀಶ ಪೂಜಾರಿ. ತೃತೀಯ-ಮಾರೂರು ಅಶ್ವಥ್ ಶೆಟ್ಟಿ. ಓಡಿಸಿದವರು: ಅತ್ತೂರು ಕೊಂಡಗೆ ಸುಧೀರ್ ಸಾಲ್ಯಾನ್. ಚತುರ್ಥ-ಸಿದ್ದಕಟ್ಟೆ ಕೆರೆಬಳಿ ಲತೀಫ್. ಓಡಿಸಿದವರು: ಸಿದ್ದಕಟ್ಟೆ ಪ್ರಸಾದ್.

ಸಬ್‌ಜೂನಿಯರ್ ನೇಗಿಲು ವಿಭಾಗ: ಪ್ರಥಮ-ಶ್ರೀ ಸ್ವಾಮಿ ಧಾಮ ಹೊಳೆಕಟ್ಟು ಕುಂಭಾಶಿ. ಓಡಿಸಿದವರು: ಬೈಂದೂರು ಮಂಜುನಾಥ ಗೌಡ. ದ್ವಿತೀಯ-ಮುಡಾರು ಹಚ್ಚೊಟ್ಟು ರೋಹನ್ ರಂಜಿತ್ ಫರ್ನಾಂಡಿಸ್(ಎ.). ಓಡಿಸಿದವರು: ಕಕ್ಯಪದವು ಮಹಮ್ಮಾಯಿ ಗೌತಮ್. ತೃತೀಯ-ಅನಂತಾಡಿ ವೈಶಾಕ್ ವೈಭವ ಮಡಿವಾಳ (ಎ). ಓಡಿಸಿದವರು: ಮಂಗಲ್ಪಾಡಿ ರಕ್ಷಿತ್ ಶೆಟ್ಟಿ ಚತುರ್ಥ-ಮೊಗರುಗುತ್ತು ನಿತಿನ್ ದಿವಿನ್ ರೈ. ಓಡಿಸಿದವರು: ಪಡುಸಕೂರು ಪೃಥ್ವಿರಾಜ್ ಪೂಜಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net