ಅಗತ್ಯ ಮೂಲಸೌಲಭ್ಯ ಒದಗಿಸಲು ಪ್ರಯತ್ನ

gan (4)
Published on

ಕುಂದಾಪುರ: ಕಳೆದ ಒಂದೂವರೆ ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ. ಸರ್ಕಾರದ ಅನುದಾನದ ನಿರೀಕ್ಷೆಯಲ್ಲಿ ಒಂದಿಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಸಾರ್ವಜನಿಕ ಸಹಭಾಗಿತ್ವದಲ್ಲಿ ಅಗತ್ಯ ಮೂಲಸೌಲಭ್ಯ ಒದಗಿಸಲು ಪ್ರಯತ್ನ ನಡೆಯುತ್ತಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

ಗಂಗೊಳ್ಳಿ ಗ್ರಾಪಂ ವ್ಯಾಪ್ತಿಯ ಲೈಟ್‌ಹೌಸ್‌ನ ಅಂಗನವಾಡಿ ಕೇಂದ್ರದಿಂದ-ನಾಗಯಕ್ಷಿ ದೇವಸ್ಥಾನದವರೆಗೆ 4 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಾಂಕ್ರೀಟ್ ರಸ್ತೆ ಹಾಗೂ 5 ಲಕ್ಷ ರೂ. ವೆಚ್ಚದ ಚರಂಡಿ ಅಭಿವೃದ್ಧಿ ಕಾರ್ಯಗಳನ್ನು ಬುಧವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ಜಯಂತಿ ಖಾರ್ವಿ, ಸದಸ್ಯರಾದ ಚಂದ್ರ ಖಾರ್ವಿ, ರಾಜೇಂದ್ರ ಶೇರುಗಾರ್, ಅಶ್ವಿನಿ ಖಾರ್ವಿ, ನಾಗರತ್ನಾ ಶೇರುಗಾರ್, ಮಹೇಶ, ಮಂಡಲ ಉಪಾಧ್ಯಕ್ಷ ಮಿಥುನ್ ಬಿಜೂರು, ಮಹಾಶಕ್ತಿ ಕೇಂದ್ರ ಅಧ್ಯಕ್ಷ ರವೀಂದ್ರ ಖಾರ್ವಿ ಹೊಸಪೇಟೆ, ಗ್ರಾಪಂ ಮಾಜಿ ಅಧ್ಯಕ್ಷ ವೈ.ಶ್ರೀನಿವಾಸ ಖಾರ್ವಿ, ಮುಖಂಡರಾದ ನಾಗರಾಜ ಖಾರ್ವಿ, ಶಾಂತಿ ಖಾರ್ವಿ, ಮಡಿ ಗೋಪಾಲ ಖಾರ್ವಿ, ಕಮಲ ಖಾರ್ವಿ, ರಾಘವೇಂದ್ರ ಪಿ.ಖಾರ್ವಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಚಿಕ್ಕ ಮೊಗವೀರ, ಅಶೋಶ ಪೂಜಾರಿ, ಮೋಹನ ಗುಜ್ಜಾಡಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net