ರೇಷ್ಮೆ ಕೃಷಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಯತ್ನ

27RAM1
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:8; brp_del_th:0.0079,0.0000; brp_del_sen:0.1000,0.0000; motionR: 0; delta:null; bokeh:0; module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 326.95844;aec_lux_index: 0;albedo: ;confidence: ;motionLevel: 0;weatherinfo: null;temperature: 30;
Published on

ರಾಮದುರ್ಗ: ರಾಜ್ಯ ಸರ್ಕಾರದಿಂದ ರೇಷ್ಮೆ ಕಂಪನಿಗೆ ಜಾಗ ಕೊಡಿಸಿದ್ದೇನೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ರೇಷ್ಮೆ ಕೃಷಿಗೆ ಅಗತ್ಯ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಅಶೋಕ ಪಟ್ಟಣ ತಿಳಿಸಿದರು.

ಪಟ್ಟಣದ ತುರನೂರ ಸಮೀಪದ ಆರಿಬೆಂಚಿ ರಸ್ತೆಯಲ್ಲಿರುವ ಸರ್ಕಾರಿ ರೇಷ್ಮೆ ಇಲಾಖೆಯ ಸಭಾಂಗಣದಲ್ಲಿ ಬೆಳಗಾವಿ ರೇಷ್ಮೆ ರೈತ ಉತ್ಪಾದಕ ಕಂಪನಿಯ ಸರ್ವ ಸದಸ್ಯರ 9ನೇ ವಾರ್ಷಿಕ ಮಹಾಸಭೆ ಹಾಗೂ ರೇಷ್ಮೆ ಬೆಳೆಗಾರರ ಸಮ್ಮೇಳನ ಶನಿವಾರ ಉದ್ಘಾಟಿಸಿ ಮಾತನಾಡಿದರು.

ರೈತರ ಹಿತದೃಷ್ಟಿಯಿಂದ ತಾಲೂಕಿನಲ್ಲಿ ವೀರಭದ್ರೇಶ್ವರ ಹಾಗೂ ಸಾಲಾಪುರ ಬಸವೇಶ್ವರ ಎರಡು ಮಹತ್ವಾಕಾಂ ಏತ ನೀರಾವರಿ ಸೌಲಭ್ಯಕ್ಕೆ ಸರ್ಕಾರದಿಂದ ಅನುದಾನ ಮಂಜೂರು ಮಾಡಿದ್ದೇನೆ. ಆರು ತಿಂಗಳಲ್ಲಿ ಬಾಕಿ ಕಾಮಗಾರಿ ಪೂರ್ಣಗೊಳಿಸಿ ಯೋಜನೆಗೆ ಅಂತಿಮ ಸ್ಪರ್ಶ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಕಂಪನಿ ನಿರ್ದೇಶಕ ಎನ್​.ಬಿ. ಶೇಖ ಮಾತನಾಡಿ, ರೇಷ್ಮೆ ಬೆಳೆಗಾರರು ಹಾಗೂ ರೆತರ ಪರವಾಗಿ ಕಂಪನಿ ಪದಾಧಿಕಾರಿಗಳು ಕೆಲಸ ಮಾಡುತ್ತೇವೆ ಎಂದರು. ಕಂಪನಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುಳಾ ಬನಪ್ಪನವರ ವಾರ್ಷಿಕ ವರದಿ ವಾಚಿಸಿದರು. ಬೆಳಗಾವಿ ರೇಷ್ಮೆ ರೆತ ಉತ್ಪಾದಕ ಕಂಪನಿ ಅಧ್ಯ ಸಿದ್ಧಾರೂಢ ರೆಬ್ಬಣ್ಣವರ, ರೇಷ್ಮೆ ಇಲಾಖೆ ನಿವೃತ್ತ ಉಪನಿರ್ದೇಶಕ ಪಿ.ಎ.ಮಗದುಮ್​, ರೇಷ್ಮೆ ಸಹಾಯಕ ನಿರ್ದೇಶಕ ಪಿ.ಎಸ್​.ಇಮಗೌಡನವರ, ನಿವೃತ್ತ ಜಂಟಿ ಕಾರ್ಯದರ್ಶಿ ಡಾ.ಈ.ಮುನಿರಾಜು, ಪಿ.ಎಸ್​.ಇಮಗೌಡನವರ ಇತರರಿದ್ದರು. ಬಸವರಾಜ ಹಾರೊಗೊಪ್ಪ ಸ್ವಾಗತಿಸಿದರು. ರುದ್ರಪ್ಪ ಸಿಂಗಾರಗೊಪ್ಪ ನಿರೂಪಿಸಿದರು. ಎಂ.ಸಿ ಉಪ್ಪಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net