

ಮೂಲ್ಕಿ: ಮನೆಗೊಂದು ಮರ ಎಂಬಂತೆ ಊರಿಗೊಂದು ರುದ್ರಭೂಮಿ ಅಗತ್ಯವಾಗಿದ್ದು, ಸುಸಜ್ಜಿತ ಹಿಂದು ರುದ್ರಭೂಮಿ ದಾನಿಗಳ ಸಹಕಾರದಲ್ಲಿ ನಿರ್ಮಾಣವಾಗಿದೆ. ಮುಂದಿನ ಯೋಜನೆಗಳಿಗಾಗಿ ಸರ್ಕಾರದಿಂದ ಸೂಕ್ತ ಅನುದಾನ ನೀಡಿಕೆ ಬಗ್ಗೆ ಪ್ರಯತ್ನಿಸುತ್ತೇನೆ ಎಂದು ಶಾಸಕ ಉವಾನಾಥ ಎ.ಕೋಟ್ಯಾನ್ ಹೇಳಿದರು.
ಶಿಥಿಲಾವಸ್ಥೆಯಲ್ಲಿದ್ದ ಮೂಲ್ಕಿ ಸಾರ್ವಜನಿಕ ಹಿಂದು ರುದ್ರಭೂಮಿ ನವೀಕರಣಗೊಂಡಿದ್ದು, ಸೋಮವಾರ ಶಾಸಕ ಉವಾನಾಥ ಕೋಟ್ಯಾನ್ ರುದ್ರಭೂಮಿ ಪರಿಸರದಲ್ಲಿ ಗಿಡ ನೆಡುವ ಮೂಲಕ ಲೋಕಾರ್ಪಣೆಗೊಳಿಸಿದರು.
ದಾನಿ ಉದ್ಯಮಿ ಅರವಿಂದ ಪೂಂಜ ವಾತನಾಡಿ, 6 ಲಕ್ಷ ರೂ. ವೆಚ್ಚದಲ್ಲಿ ಹಿಂದು ರುದ್ರಭೂಮಿ ನವೀಕರಣಗೊಂಡಿದ್ದು, ರುದ್ರಭೂಮಿಯ ಚಿತಾಗಾರ ನವೀಕರಣಕ್ಕೆ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ವತಿಯಿಂದ 1.52 ಲಕ್ಷ ರೂ., ದಾನಿ ಅರವಿಂದ ಪೂಂಜ ಸ್ವಂತ ನೆಲೆಯಲ್ಲಿ ನೂತನ ಸಿಲಿಕಾನ್ ಬಾಕ್ಸ್, ನಾಮಫಲಕ ಹಾಗೂ ಪ್ರಾಣ ಪ್ರತಿಷ್ಠಾನ ವತಿಯಿಂದ ಸಂಜೀವಿನಿ ಯೋಜನೆಯಡಿ ರುದ್ರ ಭೂಮಿಯ ಸುತ್ತಲೂ ನೂತನ ಉದ್ಯಾನವನ ನಿರ್ವಾಣ, ಸ್ವಚ್ಛತೆ ಕಾಪಾಡಲು ಪ್ರತ್ಯೇಕ ಬಾಕ್ಸ್ ಅಳವಡಿಸಲಾಗಿದೆ ಎಂದರು.
ಪ್ರಮುಖರಾದ ಡಾ.ಸಂದೀಪ್ ರಾವ್ ಬಪ್ಪನಾಡು, ಮೂಲ್ಕಿ ನಪಂ ಅಧ್ಯಕ್ಷ ಸತೀಶ್ ಅಂಚನ್, ವಾಜಿ ಅಧ್ಯಕ್ಷ ಸುನೀಲ್ ಆಳ್ವ, ಸದಸ್ಯರಾದ ಸುಭಾಷ್ ಶೆಟ್ಟಿ, ಹರ್ಷರಾಜ್ ಶೆಟ್ಟಿ, ದಯಾವತಿ ಅಂಚನ್, ಶೈಲೇಶ್ ಕುವಾರ್, ಮುಖ್ಯಾಧಿಕಾರಿ ಮಧುಕರ್, ಧ.ಗ್ರಾ.ಯೋ.ಮೇಲ್ವಿಚಾರಕಿ ನಿಶ್ಮಿತಾ ಶೆಟ್ಟಿ, ಸೇವಾ ಪ್ರತಿನಿಧಿ ಶಾಲಿನಿ, ಸ್ಥಳೀಯರಾದ ವೈ.ಎನ್.ಸಾಲ್ಯಾನ್, ರಂಗನಾಥ ಶೆಟ್ಟಿ, ಕಿರಣ್ ಶೆಟ್ಟಿ ಕೋಲ್ನಾಡ್ಗುತ್ತು, ಶಶೀಂದ್ರ ಸಾಲ್ಯಾನ್, ಪುರುಷೋತ್ತಮ ರಾವ್ ಬಪ್ಪನಾಡು, ಪ್ರವೀಣ್ ಕೋಟ್ಯಾನ್ ಕಾರ್ನಾಡ್ ಧರ್ಮಸ್ಥಾನ, ಉದಯ ಕುವಾರ್ ಶೆಟ್ಟಿ ಅಧಿಧನ್, ದೇವಿಪ್ರಸಾದ್ ಕೆಂಪುಗುಡ್ಡೆ, ವಿಟ್ಠಲ್ ಎನ್.ಎಂ., ಶ್ಯಾಮ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.