ಛಲವಾದಿ ಸಮುದಾಯದ ಏಳಿಗೆಗೆ ಶ್ರಮಿಸಿದ ಶಿವರಾಂ

5blrp1
Published on

ಬೇಲೂರು: ತಾಲೂಕು ಛಲವಾದಿ ಮಹಾಸಭಾದಿಂದ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸೋಮವಾರ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಛಲವಾದಿ ಮಹಾಸಭಾ ಅಧ್ಯಕ್ಷ ಕೆ.ಶಿವರಾಂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.


ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಮಂಜುನಾಥ್ ಚಿಕ್ಕಬೇಡಗೆರೆ ಮಾತನಾಡಿ, ಕೆ.ಶಿವರಾಂ ಅವರು ತಳ ಸಮುದಾಯಗಳ ಏಳಿಗೆಗಾಗಿ ದುಡಿದವರು. ಜಿಲ್ಲಾಧಿಕಾರಿಯಾಗಿ ಉತ್ತಮವಾಗಿ ಕೆಲಸ ನಿರ್ವಹಿಸಿ ಸೈ ಎನಿಸಿಕೊಂಡವರು. ನಿವೃತ್ತಿ ನಂತರ ರಾಜಕೀಯ ಪ್ರವೇಶಿಸಿ ಅಲ್ಲಿಯೂ ಸೇವೆ ಸಲ್ಲಿಸಿದರು. ಛಲವಾದಿ ಸಮುದಾಯಕ್ಕಾಗಿ ಹಗಲಿರುಳು ದುಡಿದು ಬೆಂಗಳೂರಿನಲ್ಲಿ ಛಲವಾದಿ ಭವನ ನಿರ್ಮಿಸಿದರು. ಅವರ ಅಂತ್ಯಕ್ರಿಯೆಯನ್ನು ಛಲವಾದಿ ಭವನದ ಸಮೀಪ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಬೇಕಿತ್ತು. ಆದರೆ, ಸರ್ಕಾರ ಹಾಗೆ ಮಾಡದಿರುವುದು ನಮ್ಮನ್ನು ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.


ಮುಖಂಡ ಪರ್ವತಯ್ಯ ಮಾತನಾಡಿ, ಕೆ.ಶಿವರಾಂ ದಲಿತ ಹಾಗೂ ಛಲವಾದಿ ಸಮುದಾಯಕ್ಕೆ ಆದರ್ಶವಾಗಿದ್ದರು. ಅವರ ಸ್ಫೂರ್ತಿಯಿಂದಲೇ ಅಂದಿನಿಂದ ಇಂದಿನವರೆಗೂ ಸಮುದಾಯದ ಸಾಕಷ್ಟು ಜನರು ಸರ್ಕಾರಿ ಉದ್ಯೋಗ ಪಡೆದಿದ್ದಾರೆ ಎಂದರು.


ಮುಖಂಡರಾದ ಎಂ.ಜಿ.ವೆಂಕಟೇಶ್, ಈಶ್ವರ್ ಪ್ರಸಾದ್, ಮೋಹನ್ ಕುಮಾರ್, ಲಕ್ಷ್ಮಣ್, ದೊರೆಸ್ವಾಮಿ, ಧರ್ಮಪ್ಪ, ರಾಮೇನಹಳ್ಳಿ ವೆಂಕಟೇಶ್, ಶಶಿಧರ್ ಮೌರ್ಯ, ಸತೀಶ್, ಜಾಕೀರ್ ಪಾಷಾ, ಕಾಸಿಂ, ರಮೇಶ್, ಎಂ.ಜಿ.ನಿಂಗರಾಜು, ರಘು, ಈರೇಶ್, ಮರಿಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net