

ಹೊನ್ನಾಳಿ: ಸತತ ಅಭ್ಯಾಸ, ಸಂಶೋಧನೆ, ಶ್ರಮದಿಂದ ಮಾತ್ರ ನಾವು ಸಾಧಕರ ಸಾಲಿನಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದು ಎಚ್. ದೇವಿರಪ್ಪ ಟ್ರಸ್ಟ್‌ನ ಅಧ್ಯಕ್ಷ ಡಿ. ತೀರ್ಥಲಿಂಗಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಕತ್ತಿಗೆ ಗ್ರಾಮದಲ್ಲಿ ಕೆಬಿಸಿ ಸೇವಾ ಟ್ರಸ್ಟ್ ಹಾಗೂ ಸರ್ಕಾರಿ ಪ್ರೌಢಶಾಲೆ ವತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಪ್ರತಿಭೆ ನಿಮ್ಮ ಮನಸ್ಸಿನೊಳಗಿನ ಜ್ಞಾನ. ಈ ಜ್ಞಾನ ಹೆಕ್ಕಿ ತೆಗೆಯಬೇಕು. ಆಗ ಮಾತ್ರ ಪ್ರತಿಭೆಗಳಿಗೆ ಅರ್ಥ ಬರುತ್ತದೆ. ಆದ್ದರಿಂದ ನಿರಂತರ ಅಧ್ಯಯನ ಹಾಗೂ ಸಂಶೋಧನೆ ಅಗತ್ಯ ಎಂದರು.
ಕೆಬಿಸಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕತ್ತಿಗೆ ಚನ್ನಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಎಲ್ಲ್ಲ ರಂಗದಲ್ಲೂ ಸಾಧನೆ ಮಾಡುತ್ತಿದ್ದಾರೆ. ಸಾಧನೆಗೆ ಅಸಾಧ್ಯವಾದುದ್ದು ಯಾವುದೂ ಇಲ್ಲ. ಯಾ ವುದಾದರೂ ಕ್ಷೇತ್ರದಲ್ಲಿ ಸಾಧನೆ ಮಾಡಿದರೆ ಆಗ ಸಮಾಜ ನಿಮ್ಮನ್ನು ಗೌರವಿಸಿ ಉನ್ನತ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತದೆ ಎಂದರು.
ಹಿರಿಯ ಪತ್ರಕರ್ತ ಎನ್.ಕೆ. ಆಂಜನೇಯ ಮಾತನಾಡಿದರು. ಕಾರ್ಯಕ್ರಮವನ್ನು ಎನ್.ವಿ. ಹಾಲಪ್ಪ ಉದ್ಘಾಟಿಸಿದರು. ಇದಕ್ಕೂ ಮುನ್ನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ್, ಸಿದ್ದೇಶ್, ಗ್ರಾಪಂ ಸದಸ್ಯೆ ಮಮತಾ, ಮುಖ್ಯಶಿಕ್ಷಕ ರವಿ, ಪತ್ರಿಕಾ ವಿತರಕ ಕತ್ತಿಗೆ ರುದ್ರಪ್ಪ ಇತರರು ಇದ್ದರು.