ಈಡಿಗರ ಹೋರಾಟಕ್ಕೆ ಸರ್ಕಾರದ ಸ್ಪಂದನೆ

21 gvt 02
Published on

ಗಂಗಾವತಿ: ಈಡಿಗ ಸಮುದಾಯದ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಿದ ರಾಜ್ಯ ಸರ್ಕಾರದ ಕ್ರಮ ಸ್ವಾಗತಿಸಿ ತಾಲೂಕು ಈಡಿಗ ಸಮಾಜದ ಕಾರ್ಯಕರ್ತರು ನಗರದ ಶ್ರೀಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.


ಸಮಾಜದ ವ್ಯಕ್ತಿತ್ವ ವಿಕಸನದ ಸಂಪನ್ಮೂಲ ವ್ಯಕ್ತಿ ನಾಗರಾಜ ಗುತ್ತೇದಾರ್ ಮಾತನಾಡಿ, 10 ವರ್ಷಗಳ ಹೋರಾಟದ ಲದಿಂದ ಸಮುದಾಯದ ಅಭಿವೃದ್ಧಿಗೆ ಮಾನ್ಯತೆ ದೊರೆತಿದೆ. ಉದ್ಯೋಗ ಸೃಷ್ಟಿಗಾಗಿ ಸೇಂದಿ ಮಾರುವ ಯೋಜನೆ ರಾಜ್ಯ ಸರ್ಕಾರ ಜಾರಿಗೊಳಿಸಿ ಶೋಷಿತ ಸಮುದಾಯವನ್ನು ಮುಖ್ಯವಾಹಿನಿಗೆ ತರಬೇಕು. ಪ್ರಾಧಿಕಾರದ ರಚನೆ ಹೋರಾಟ ಗಂಗಾವತಿಯಲ್ಲಿ ಆರಂಭವಾಗಿದ್ದು, ಮಂಗಳೂರಿನಿಂದ ಮತ್ತು ಬೆಂಗಳೂರಿನವರೆಗೂ ಕುಲಗುರುಗಳಾದ ಪ್ರಣವಾನಂದ ಸ್ವಾಮೀಜಿ ಪಾದಯಾತ್ರೆಗೆ ವೇದಿಕೆಯಾಗಿತ್ತು. ಅಭಿವೃದ್ಧಿ ಪ್ರಾಧಿಕಾರಕ್ಕೆ ಆರಂಭಿಕ ಹಂತದಲ್ಲಿ 50 ಕೋಟಿ ರೂ.ಮೀಸಲಿಡಬೇಕೆಂದು ಒತ್ತಾಯಿಸಿದರು.

ಮುಖಂಡರಾದ ಬಿಚ್ಚಾಲಿ ಮಲ್ಲಿಕಾರ್ಜುನ, ಶ್ರವಣಕುಮಾರ, ಭುವನೇಶಪ್ಪ, ಯುಮನೂರಪ್ಪ ಗುಂಡೂರು, ತಿರುಮಲೇಶ, ಈ.ರಾಮು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net