

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಇಲ್ಲಿನ ಶಾರದೋತ್ಸವ ಸಮಿತಿ ವತಿಯಿಂದ ನಲ್ವತ್ತೊಂಬತ್ತು ವರ್ಷಗಳಿಂದ ಗಂಗೊಳ್ಳಿಯಲ್ಲಿ ಶಾರದಾ ಮಹೋತ್ಸವ ವಿಶೇಷವಾಗಿ ಆಚರಿಸುತ್ತಾ ಬಂದಿದ್ದು, ಜತೆಗೆ ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕವಾಗಿ ಸಮಾಜಮುಖಿ ಕೆಲಸವನ್ನು ಸಮಿತಿ ಮಾಡುತ್ತಾ ಬಂದಿದೆ ಎಂದು ಜಿಎಸ್‌ವಿಎಸ್ ಅಸೋಸಿಯೇಶನ್ ಕಾರ್ಯದರ್ಶಿ ಎಚ್.ಗಣೇಶ ಕಾಮತ್ ಹೇಳಿದರು.
ಗಂಗೊಳ್ಳಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಸುವರ್ಣ ಮಹೋತ್ಸವ-2024 ಅಂಗವಾಗಿ ಗಂಗೊಳ್ಳಿಯ ಸ.ವಿ. ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಗುರುವಾರ ಸಂಜೆ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಯಮಿ ಪದ್ಮನಾಭ ಕೊತ್ವಾಲ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಸವಿತಾ ಯು. ದೇವಾಡಿಗ, ಸುಜಾತಾ ಬಾಬು ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.
ನಿತಿನ್ ಖಾರ್ವಿ ಸ್ವಾಗತಿಸಿದರು. ಸತೀಶ ಜಿ. ಪ್ರಸ್ತಾವನೆಗೈದರು. ಬಿ.ಲಕ್ಷ್ಮೀಕಾಂತ ಮಡಿವಾಳ ಅತಿಥಿಗಳನ್ನು ಗೌರವಿಸಿದರು. ಶ್ರೀಧರ ಎನ್.ಸಕ್ಲಾತಿ ವಂದಿಸಿದರು. ಸುಂದರ ಜಿ. ನಿರೂಪಿಸಿದರು.
ಗ್ರಾಮದ ಸಮೃದ್ಧಿ ಮತ್ತು ಮತ್ಸ್ಯಕ್ಷಾಮ ನಿವಾರಣೆಗಾಗಿ ಶಾರದಾ ಮಾತೆಯ ಕೋಟಿ ಜಪ ಯಜ್ಞದ ಜಪ ಸಮರ್ಪಣೆ ಹಾಗೂ ಲಕ್ಷ ಕುಂಕುಮಾರ್ಚನೆ ಸೇವೆ ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ಶುಕ್ರವಾರ ನಡೆಯಿತು. ಜಿ.ರಾಘವೇಂದ್ರ ನಾರಾಯಣ ಆಚಾರ್ಯ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಸತೀಶ ಜಿ, ನಿತಿನ್ ಖಾರ್ವಿ, ಬಿ.ಲಕ್ಷ್ಮೀಕಾಂತ ಮಡಿವಾಳ, ಶ್ರೀಧರ ಎನ್, ಸವಿತಾ ಯು.ದೇವಾಡಿಗ, ಸುಜಾತಾ ಬಾಬು ಖಾರ್ವಿ, ಇತರರು ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳಿಂದ ಗಂಗೊಳ್ಳಿಯ ಸ.ವಿ. ಪದವಿಪೂರ್ವ ಕಾಲೇಜಿನ ವಠಾರದಲ್ಲಿ ನಡೆದ ಕುಣಿತ ಭಜನಾ ಸ್ಪರ್ಧೆಯಲ್ಲಿ ಕಾರ್ಕಳದ ಶ್ರೀಆಂಜನೇಯ ಭಜನಾ ಮಂಡಳಿ ಸಾಣೂರು ಪ್ರಥಮ, ಮೇಲ್‌ಗಂಗೊಳ್ಳಿ ಶ್ರೀ ಬಸವೇಶ್ವರ ಭಜನಾ ಮಂಡಳಿ ದ್ವಿತೀಯ ಹಾಗೂ ತ್ರಾಸಿಯ ಶ್ರೀ ರಾಮ ಗಣಪತಿ ಅಯ್ಯಪ್ಪ ಭಜನಾ ಮಂಡಳಿ ಸ್ಥಾನ ಪಡೆದವು. ಗಂಗೊಳ್ಳಿ ಜಿಎಸ್‌ವಿಎಸ್ ಅಸೋಸಿಯೇಶನ್ ಕಾರ್ಯದರ್ಶಿ ಎಚ್.ಗಣೇಶ ಕಾಮತ್ ಕಾರ್ಯಕ್ರಮ ಉದ್ಘಾಟಿಸಿದರು. ಪದ್ಮನಾಭ ಕೊತ್ವಾಲ್ ಅಧ್ಯಕ್ಷತೆ ವಹಿಸಿದ್ದರು. ಸತೀಶ ಜಿ, ನಿತಿನ್ ಖಾರ್ವಿ, ಬಿ.ಲಕ್ಷ್ಮೀಕಾಂತ ಮಡಿವಾಳ, ಶ್ರೀಧರ ಎನ್.ಸಕ್ಲಾತಿ, ಸವಿತಾ ಯು.ದೇವಾಡಿಗ, ಸುಜಾತಾ ಬಾಬು ಖಾರ್ವಿ, ಅರುಣ್ ಕುಂದರ್, ರವಿಶಂಕರ ಹೆಬ್ಬಾರ್ ಮತ್ತು ದಿನೇಶ ಸುವರ್ಣ ಹಲವರು ಉಪಸ್ಥಿತರಿದ್ದರು. ಒಂಬತ್ತು ಭಜನಾ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಸಮಿತಿ ವತಿಯಿಂದ ಲೋಕಕಲ್ಯಾಣಾರ್ಥ ಚಂಡಿಕಾ ಯಾಗ ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ಗುರುವಾರ ನೆರವೇರಿತು. ಜಿ.ರಾಘವೇಂದ್ರ ಆಚಾರ್ಯ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ಬಾಬು ಪೂಜಾರಿ ದಂಪತಿ, ಸುಬ್ರಹ್ಮಣ್ಯ ಶೇರುಗಾರ್ ದಂಪತಿ ಹಾಗೂ ಚೌಕಿ ಸಂತೋಷ ಖಾರ್ವಿ ದಂಪತಿ ಯಾಗದ ಮುಂದಾಳತ್ವ ವಹಿಸಿದ್ದರು. ಸತೀಶ್ ಜಿ, ನಿತಿನ್ ಖಾರ್ವಿ, ಶ್ರೀಧರ ಸಕ್ಲಾರಿ, ಸವಿತಾ ಯು.ದೇವಾಡಿಗ ಹಲವರು ಉಪಸ್ಥಿತರಿದ್ದರು.