ಗುಂಡ್ಮಿಯಲ್ಲಿ ಸಹಸ್ರನಾಮ ಪಠಣಕ್ಕೆ ತೆರೆ

mahasabha
ಗುಂಡ್ಮಿ ಶ್ರೀ ಭಗವತಿ ಅಮ್ಮನವರ ದೇವಸ್ಥಾನದಲ್ಲಿ ಸಾಲಿಗ್ರಾಮ ಬ್ರಾಹ್ಮಣ ಮಹಾಸಭಾ ವಲಯದ ವತಿಯಿಂದ ನಡೆಯುತ್ತಿದ್ದ ಲಲಿತಾ ಸಹಸ್ರನಾಮ ಪಾರಾಯಣ ಶುಕ್ರವಾರ ಕೊನೆಗೊಂಡಿತು.
Published on

ಕೋಟ: ಗುಂಡ್ಮಿ ಶ್ರೀ ಭಗವತಿ ಅಮ್ಮನವರ ದೇವಸ್ಥಾನದಲ್ಲಿ ಸಾಲಿಗ್ರಾಮ ಬ್ರಾಹ್ಮಣ ಮಹಾಸಭಾ ವಲಯದ ವತಿಯಿಂದ ನಿತ್ಯವೂ ನಡೆಯುತ್ತಿದ್ದ ಲಲಿತಾ ಸಹಸ್ರನಾಮ ಪಾರಾಯಣ ಶುಕ್ರವಾರ ಸಂಪನ್ನ ಗೊಂಡಿತು.

ಶರನ್ನವರಾತ್ರಿ ಪ್ರಯುಕ್ತ ಬ್ರಾಹ್ಮಣ ಮಹಾಸಭಾ ಮಹಿಳಾ ಬಳಗದಿಂದ ಪಾರಾಯಣ ನಡೆಯಿತು. ದೇವಳದ ಆಡಳಿತ ಮಂಡಳಿ ಪರವಾಗಿ ಜಿ. ಶಿವಾನಂದ ಮೈಯ್ಯ ಮಹಿಳಾ ಬಳಗಕ್ಕೆ ಕೃತಜ್ಞತೆ ಸಲ್ಲಿಸಿದರು. ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಯಂ.ಶಿವರಾಮ, ಉದಯ ಕುಮಾರ್ ಮೈಯ್ಯ, ಜಿ. ರಾಮಚಂದ್ರ ಐತಾಳ, ಕಾಶೀಶ್ವರ ಮೈಯ್ಯ, ಪಟ್ಟಾಭಿರಾಮ ಸೋಮಯಾಜಿ, ಸುಕನ್ಯಾ ಸೋಮಯಾಜಿ ಉಪಸ್ಥಿತರಿದ್ದರು. ಕೆ.ರಾಜಾರಾಮ ಐತಾಳ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net