ಭವಿಷ್ಯ ರೂಪಿಸುವಲ್ಲಿ ವಿದ್ಯಾಸಂಸ್ಥೆಗಳ ಪಾತ್ರ ಹಿರಿದು: ಅರುಣ್ ಶೆಟ್ಟಿ ಅಭಿಮತ

Kin_Skodi
Published on

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ

ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ವಿದ್ಯಾಸಂಸ್ಥೆಗಳ ಪಾತ್ರ ಹೆತ್ತವರಿಗಿಂತಲೂ ಮಿಗಿಲು. ಆ ಋಣವನ್ನು ತೀರಿಸುವ ಜವಾಬ್ದಾರಿ ಮಕ್ಕಳು ಮತ್ತು ಪೋಷಕರದ್ದು, ಈ ನಿಟ್ಟಿನಲ್ಲಿ ಎಲ್ಲ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಿದ ಶಾಲೆಗೆ ನೆರವಾಗುವ ಮೂಲಕ ಕೃತಜ್ಞತಾ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಅರುಣ್ ಶೆಟ್ಟಿ ಹೇಳಿದರು.

ತಮ್ಮ ಮೂವರು ಮಕ್ಕಳಾದ ಡಾ.ಆಶಿಕ್ ಶೆಟ್ಟಿ, ಡಾ.ಅಕ್ಷಯ್ ಶೆಟ್ಟಿ ಮತ್ತು ಅಮೃತ್ ಶೆಟ್ಟಿ ವಿದ್ಯಾಭ್ಯಾಸ ವಾಡಿದ ನಿಟ್ಟೆ ವಿದ್ಯಾಸಂಸ್ಥೆಯ ಆಡಳಿತಕ್ಕೊಳಪಟ್ಟ ತೋಕೂರಿನ ಎಸ್.ಕೋಡಿ ಡಾ.ರಾಮಣ್ಣ ಶೆಟ್ಟಿ ಮೆಮೋರಿಯಲ್ ಆಂಗ್ಲ ವಾಧ್ಯಮ ಶಾಲೆ ದತ್ತಿನಿಧಿಗೆ 1 ಲಕ್ಷ ರೂ. ಕೊಡುಗೆ ನೀಡಿ ಮಾತನಾಡಿದರು.

ಪ್ರಾಂಶುಪಾಲೆ ಶ್ರೀಲತಾ ರಾವ್ ಮಾತನಾಡಿ, ಡಾ.ರಾಮಣ್ಣ ಶೆಟ್ಟಿ ಮೆಮೋರಿಯಲ್ ಆಂಗ್ಲ ವಾಧ್ಯಮ ಶಾಲೆಯು ಮೌಲ್ಯಯುತ, ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದ್ದು, ಇಲ್ಲಿ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ರೂಪಿಸಿಕೊಂಡು, ಅನೇಕ ಕ್ಷೇತ್ರಗಳಲ್ಲಿ ಉನ್ನತಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಆರಂಭಿಕ ಹಂತದಲ್ಲಿಯೇ ಶಿಸ್ತುಬದ್ಧವಾಗಿ ಮಕ್ಕಳ ಸಮಗ್ರ ಬೆಳವಣಿಗೆಗೆ ಪೂರಕವಾದ ಅಭ್ಯಾಸ ಮತ್ತು ಚಟುವಟಿಕೆಗಳನ್ನು ಕಲಿಸಲಾಗುತ್ತದೆ ಎಂದರು.

ಶಿಕ್ಷಕ- ರಕ್ಷಕ ಸಂಘ ಅಧ್ಯಕ್ಷ ಪುಷ್ಪರಾಜ್ ಚೌಟ, ಕಾರ್ಯಕಾರಿ ಸಮಿತಿಯ ಸ್ವರಾಜ್ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net