

ಖಾನಾಪುರ: ಸಾಮಾಜಿಕ ಕಳಕಳಿ ಹೊಂದಿರುವ ಅಲೈಯನ್ಸ್ ಕ್ಲಬ್ ಶಾಖೆ ತೆರೆಯುವ ಮೂಲಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.
ಪಟ್ಟಣದ ಶಾಂತಿನಿಕೇತನ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಅಲೈಯನ್ಸ್ ಕ್ಲಬ್ ಶಾಖೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿವಿಧ ಪಠ್ಯೇತರ ಚಟುವಟಿಕೆ ರೂಪಿಸಿರುವ ನೂತನ ಶಾಖೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕ್ಲಬ್ ನೂತನ ಪದಾಧಿಕಾರಿಗಳಿಗೆ ಅಲೈಯನ್ಸ್ ಇಂಟರ್ನ್ಯಾಷನಲ್ ಕ್ಲಬ್ ಕಾರ್ಯಾಧ್ಯಕ್ಷ ದಿನಕರ್ ಶೆಟ್ಟಿ ಅಧಿಕಾರ ಹಸ್ತಾಂತರಿಸಿದರು.ಸದಸ್ಯೆ ನವೀನಾ ಶೆಟ್ಟಿ ಪ್ರತಿಜ್ಞಾವಿಧಿ ಬೋಧಿಸಿದರು.
ಭದ್ರತಾ ವಿಭಾಗದ ಸಲಹೆಗಾರ ರಾಜೀವ್ ಮೇತ್ರಿ, ರವೀಂದ್ರ ತೋಟಿಗೇರ, ಸ್ವಾತಿಕಮಲ ವಾಳ್ವೆ, ಮನೀಷಾ ಬೋಸಲೆ, ಸಂಗೀತಾ ಗುರವ, ಇತರರಿದ್ದರು.