

ದೇವದುರ್ಗ: ಪಟ್ಟಣದ ಹೊರವಲಯದಲ್ಲಿರುವ ಎಜುಕೇಷನ್ ಲೇಔಟ್‌ಗೆ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಪಟ್ಟಣದ ಬಸ್ ಡಿಪೋ ಮುಂದೆ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಎಜುಕೇಷನ್ ಲೇಔಟ್‌ನಲ್ಲಿ ಕಿತ್ತೂರುರಾಣಿ ಚನ್ನಮ್ಮ, ಮುರಾರ್ಜಿ ವಸತಿ ಶಾಲೆ, ಡಿ.ದೇವರಾಜ ಅರಸು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಸತಿ ನಿಲಯ, ಎಸ್ಟಿ ಬಾಲಕರ ವಸತಿ ನಿಲಯ ಹಾಗೂ ಬಾಲಕಿಯರ ವಸತಿ ನಿಲಯಗಳಿವೆ. ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ನಿತ್ಯ ಓಡಾಡುತ್ತಾರೆ.
ಸರಿಯಾದ ಬಸ್ ಸೌಲಭ್ಯ ಇಲ್ಲದ ಕಾರಣ ಸಮಸ್ಯೆ ಎದುರಿಸುವಂತಾಗಿದ್ದು, ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ಶೆಲ್ಟರ್ ನಿರ್ಮಿಸಬೇಕು. ಬೀದಿದೀಪ ಅಳವಡಿಸಬೇಕು. ರಾಯಚೂರು- ದೇವದುರ್ಗ ಮಾರ್ಗದ ಮೂಲಕ ಓಡಾಡುವ ಎಲ್ಲ ಬಸ್‌ಗಳನ್ನು ನಿಲುಗಡೆ ಮಾಡಬೇಕು. ನಿರ್ಲಕ್ಷ್ಯ ಮಾಡಿದರೆ ಸಂಚಾರತಡೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ತಾಲೂಕು ಅಧ್ಯಕ್ಷ ಮಹಾಲಿಂಗ ದೊಡ್ಡಮನಿ, ಸಹ ಕಾರ್ಯದರ್ಶಿ ಬಾಷಾಸಾಬ್, ಪ್ರಮುಖರಾದ ಬಾಬು ಶ್ಯಾಣೇರ್‌ದೊಡ್ಡಿ, ದಿಲ್‌ಶಾದ್, ಅಮೀರ್ ಹುಸೇನ್, ಸಂತೋಷ್ ತ್ಯಾಪ್ಲಿ, ಹನುಮಂತ, ಶಿವರಾಜ, ನರಸಣ್ಣ, ವಿದ್ಯಾರ್ಥಿಗಳಾದ ಪಕ್ಕೀರಣ್ಣ, ಸ್ವಾತಿ, ಯಂಕಮ್ಮ, ರಾಜು, ಫಯಾಜ್, ದಾದವಲಿ, ದೇವರಾಜ, ರಾಜು ಇತರರಿದ್ದರು.