ಫೆ.24ರಿಂದ ಆತ್ಮಲಿಂಗೇಶ್ವರ ಕ್ಷೇತ್ರದಲ್ಲಿ ಶಿವರಾತ್ರಿ ಸಂಭ್ರಮ: ಭಾರತಿ ಎಜುಕೇಷನ್ ಟ್ರಸ್ಟ್ ಕಾರ್ಯಾಧ್ಯಕ್ಷ ಬಿ.ಬಸವರಾಜು ಮಾಹಿತಿ

Bharathi Education Trust press conference Mandya
Published on

ಮಂಡ್ಯ: ಮದ್ದೂರು ತಾಲೂಕು ಹನುಮಂತನಗರದ ಆತ್ಮಲಿಂಗೇಶ್ವರ ಪುಣ್ಯಕ್ಷೇತ್ರದಲ್ಲಿ ಮಹಾಶಿವರಾತ್ರಿಯ ಅಂಗವಾಗಿ ಫೆ.24ರಿಂದ ಮಾ.1ರವರೆಗೆ ಉತ್ಸವ, ಧಾರ್ಮಿಕ ಮತ್ತು ಸಾಂಸ್ಕೃತಿ ಕಾರ್ಯಕ್ರಮ ನೆರವೇರಲಿವೆ ಎಂದು ಭಾರತಿ ಎಜುಕೇಷನ್ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಬಿ.ಬಸವರಾಜು ತಿಳಿಸಿದರು.

ಆತ್ಮಲಿಂಗೇಶ್ವರ ಕ್ಷೇತ್ರದಲ್ಲಿ ಕಳೆದ 32 ವರ್ಷದಿಂದ ಶಿವರಾತ್ರಿ ಉತ್ಸವ, ರಥೋತ್ಸವ, ಭಾರೀ ದನಗಳ ಜಾತ್ರೆ ಆಯೋಜಿಸಿಕೊಂಡು ಬರಲಾಗುತ್ತಿದೆ. 24ರಂದು ಧ್ವಜಾರೋಹಣ, ಮಹಾಮಂಗಳಾರತಿ, ಪಂಚಗವ್ಯ, ಮಹಾಗಣಪತಿ ಪೂಜೆ, ರಕ್ಷಾಬಂಧನ, ಮಹಾಗಣಪತಿ ಹೋಮ, ಲಘು ಪೂರ್ಣಾಹುತಿ ದಿಗ್ಬಲಿ, ಮಹಾಮಂಗಳಾರತಿ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

25ರಂದು ನಿತ್ಯಪೂಜೆ, ಮಹಾಮಂಗಳಾರತಿ, 26ರಂದು ಮಹಾಶಿವರಾತ್ರಿಯ ಧಾರ್ಮಿಕ ಕಾರ್ಯಕ್ರಮ, ಮಹಾಮಂಗಳಾರತಿ, ವಾದ್ಯಗೋಷ್ಠಿ, ಸೋಬಾನೆ ಪದ, ಪ್ರವಚನ, ಭರತನಾಟ್ಯ, ಭಜನೆ, ಸಾಂಸ್ಕೃತಿ ಕಾರ್ಯಕ್ರಮ, ದೊಣ್ಣೆವರಸೆ, ಕೋಲಾಟ, ಅಖಂಡ ಭಜನೆ, 27ರಂದು ಮಹಾಮಂಗಳಾರತಿ, ಪೂಜಾಭಿಷೇಕ, ವಿಶೇಷ ಪೂಜಾಲಂಕಾರ, 28ರಂದು ರಥೋತ್ಸವ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ವಿವರಿಸಿದರು.

ಟ್ರಸ್ಟ್ ಕಾರ್ಯದರ್ಶಿ ಸಿದ್ದೇಗೌಡ, ಧರ್ಮದರ್ಶಿ ಮಂಡಳಿ ಸದಸ್ಯ ಕೆ.ಎಸ್.ಗೌಡ, ಸ್ನಾತಕೋತ್ತರ ವಿಭಾಗದ ಸದಸ್ಯ ಎಸ್.ನಾಗರಾಜು, ಕನ್ನಡ ಉಪನ್ಯಾಸಕ ಶಿವಲಿಂಗೇಗೌಡ, ಎಸ್.ಬೋರಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net