ಅಕ್ಷರ ಕ್ರಾಂತಿ ದುರ್ಬಲ ಸಮುದಾಯದ ಅಸ್ತ್ರ

06-kkr2(12-23
Published on

ಕಿಕ್ಕೇರಿ: ಸಮಾನತೆ ಎಂಬುದು ಕೇವಲ ಬಾಯಿ ಮಾತಾಗದೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಎಲ್ಲೆಡೆ ಕಾಣಬೇಕಿದೆ ಎಂದು ಸೆಸ್ಕ್ ಕಚೇರಿ ಮೇಲ್ವಿಚಾರಕ ಮಲ್ಲಿಕಾರ್ಜುನ ತಿಳಿಸಿದರು.


ಪಟ್ಟಣದ ಸೆಸ್ಕ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಪರಿ ನಿರ್ವಾಣ ದಿನ ಸಮಾರಂಭದಲ್ಲಿ ಮಾತನಾಡಿ, ಅಕ್ಷರ ಕ್ರಾಂತಿ ದುರ್ಬಲ ಸಮುದಾಯದ ಅಸ್ತ್ರವಾಗಬೇಕಿದೆ. ಸಮಬಾಳು, ಸಮಪಾಲು ಎಲ್ಲರ ಹಕ್ಕಾಗಬೇಕಿದೆ. ಮೀಸಲಾತಿ ದುರ್ಬಲ ಸಮುದಾಯ ಮೇಲೆತ್ತಲು ಇರುವ ಯೋಜನೆಯಾಗಿದೆ. ಇದು ಭಿಕ್ಷೆಯಲ್ಲ. ಜಾತಿ ಸಂಕೋಲೆ ಬೇಡ. ನಮಗೆ ಬೇಕಿರುವುದು ಎಲ್ಲರಂತೆ ಬದುಕು ಎಂದರು.


ಕಿರಿಯ ಇಂಜಿನಿಯರ್ ಶ್ರೀಧರ್, ಮಹದೇವು, ರಾಜೇಶ್, ಎಲ್.ಆರ್.ರವಿಕುಮಾರ್, ದರ್ಶನ್, ಕಾರ್ತಿಕ್, ಮಹೇಶ್, ಶರತ್, ಶಿವರಾಂ, ಪ್ರಸನ್ನ, ಪ್ರದೀಪ, ಧೃವಕುಮಾರ್, ಬಾಬು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net